• Uncategorised

Midnight ಪಾರ್ಟಿಯಲ್ಲಿ ದರ್ಶನ್ ಜೊತೆ ಡಿಸ್ಕೋ ಡ್ಯಾನ್ಸ್ ಮಾಡಿದ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ಹಬ್ಬದೂಟ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಇದೀಗ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದರ ಸಂತೋಷ ಕೂಟದಲ್ಲಿ ಪಾಲ್ಗೊಂಡ ದರ್ಶನ ಅವರು ಹೆಂಡತಿಯೊಡನೆ ಡ್ಯಾನ್ಸ್ ಒಂದಕ್ಕೆ ಹೆಜ್ಜೆ ಹಾಕಿದ್ದಾರೆ. ಹೌದು ಇತ್ತಿಚಿಗೆ ಎಲ್ಲೆಡೆ ದರ್ಶನ ಕುಟುಂಬದವರೊಂದಿಗೆ ಕಾಣಿಸಿಕೊಳ್ಳುತ್ತಿರುವುದು ನೋಡುಗರ ಕಣ್ಣಿಗೆ ಹಬ್ಬದಂತಾಗಿದೆ.

ಇದೆಲ್ಲದರ ನಡುವೆ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಹೆಜ್ಜೆ ಹಾಕಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ದರ್ಶನ್- ವಿಜಯಲಕ್ಷ್ಮಿ ದಂಪತಿ ಡ್ಯಾನ್ಸ್ ಮಾಡಿದ್ದಾರೆ.ಆಶಿಕಿ- 2 ಚಿತ್ರದ ಹಮ್ ತೇರೆ ಬಿನ್ ಅಬ್ ರೆಹ್ ನಹೀ ಸಕ್ತೆ ಹಾಡಿಗೆ ರೊಮ್ಯಾಂಟಿಕ್ ಮೂಡ್‌ನಲ್ಲಿ ದರ್ಶನ್- ವಿಜಯಲಕ್ಷ್ಮಿ ಸಿಂಪಲ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಸುತ್ತ ಇದ್ದವರು ಚಪ್ಪಾಳೆ ತಟ್ಟಿ ಚಿಯರ್ ಅಪ್ ಮಾಡಿದ್ದಾರೆ. ದರ್ಶನ್ ಅಂತೂ ಬ್ಲ್ಯಾಕ್ ಟೀ-ಶರ್ಟ್ ಹಾಗೂ ಬ್ಲೂ ಡೆನಿಮ್‌ನಲ್ಲಿ ಸ್ಟೈಲಿಶ್‌ ಲುಕ್‌ನಲ್ಲಿ ಮಿಂಚಿದ್ದಾರೆ.

ಸದ್ಯ ಈ ಸಣ್ಣ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಅಭಿಮಾನಿಗಳ ವಾಟ್ಸಪ್‌ ಸ್ಟೇಟಸ್, ಇನ್‌ಸ್ಟಾ, ಎಫ್‌ಬಿ ಸ್ಟೋರಿಯಲ್ಲಿ ರಾರಾಜಿಸ್ತಿದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ವಿಜಯಲಕ್ಷ್ಮಿ ಕೆಮಿಕಲ್​ ಇಂಜಿನಿಯರ್ ಪದವೀಧರೆ​. ದೂರದ ಸಂಬಂಧಿಕರೆ ಆದರೆ ವಿಜಯಲಕ್ಷ್ಮಿ ಅವರನ್ನು ಬರ್ತ್‌ಡೇ ಪಾರ್ಟಿಯಲ್ಲಿ ನೋಡಿ ದರ್ಶನ್ ಇಷ್ಟಪಟ್ಟಿದ್ದರು. ಬಳಿಕ ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಧರ್ಮಸ್ಥಳದಲ್ಲಿ ಮದುವೆ ಆಗಿದ್ದರು.

ದಂಪತಿಗೆ ವಿನೀಶ್ ಎಂಬ ಮಗ ಕೂಡ ಇದ್ದಾನೆ. ಐರಾವತ ಹಾಗೂ ಯಜಮಾನ ಸಿನಿಮಾಗಳ ಸಣ್ಣ ಝಲಕ್‌ನಲ್ಲಿ ವಿನೀಶ್ ಸಹ ಕಾಣಿಸಿಕೊಂಡಿದ್ದಾನೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗ ಇರುತ್ತಾರೆ. ಆಗಿಂದ್ದಾಗೆ ಫೋಟೊ, ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ದರ್ಶನ್ ಎಲ್ಲೇ ಹೋದರೂ ಬಂದರೂ ಫೋಟೊ, ವಿಡಿಯೋ ವೈರಲ್ ಆಗುತ್ತಿರುತ್ತದೆ. ಕಳೆದ ವರ್ಷ ದಂಪತಿ ಮಗನ ಜೊತೆ ವಿದೇಶ ಪ್ರವಾಸಕ್ಕೆ ಹೋಗಿ ಬಂದಿದ್ದರು. ಇನ್ನು ಜೀಪ್‌ನಲ್ಲಿ ಒಮ್ಮೆ ದಂಪತಿ ರೈಡ್ ಹೋಗುವಾಗ ಅಭಿಮಾನಿಯೊಬ್ಬ ವಿಡಿಯೋ ಮಾಡಿದ್ದ. ಜೀಪ್ ಚೇಸ್ ಮಾಡುತ್ತಿದ್ದ ಆತನಿಗೆ ದರ್ಶನ್ ಬೈದು ಬುದ್ದಿ ಹೇಳಿದ್ದರು.

You may also like...