ದೇಶದ ರೈತರಿಗೆ ಸಂಕಷ್ಟ ಬಂದಾಗ ಇಡೀ ದೇಶದ ಜನರು ಒಟ್ಟಾಗಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾರೆ. ಯಾಕೆಂದರೆ ರೈತರು ಇಲ್ಲವೆಂದರೆ ನಾವೆಲ ಇರುವುದಕ್ಕೆ ಸಾಧ್ಯವಿಲ್ಲ. ಅದೆಷ್ಟೋ ರೈತರು ದಿನನಿತ್ಯ ಅನ್ನ ಆಹಾರ ಬೆಲೆದು ಮಾರುಕಟ್ಟೆಗೆ ತಂದು ಕೊಡುವುದರಿಂದ ಇವತ್ತು ದೇಶದ ಜನರು ಆರೋಗ್ಯದಿಂದ ಇದ್ದಾರೆ.
ಹಾಗೇಯೆ ರೈತರು ತಾವು ದುಡಿದ ಅನ್ನ ಪದಾರ್ಥಗಳಿಗೆ ನಿಗದಿತ ಬೆಲೆ ಇಟ್ಟು ಜನ ಸಾಮಾನ್ಯರಿಗೆ ನೀಡುತ್ತಾರೆ. ಆದರೆ ಇಂತಹ ಅನ್ನದಾತ ರೈತರಿಗೆ ಸಾಲಬಾದೆಗಳಿಂದ ಇವತ್ತು ಆತ್ಮಹತ್ಯೆ ಎಂಬ ದಾರಿ ಹಿಡಿಯುತ್ತಿದ್ದಾರೆ. ಇದರ ಜೊತೆಗೆ ಬರಗಾಲ ಹಾಗೂ ಕೋಟ್ಯಾಂತರ ವೆಚ್ಚದ ಬೆಲೆ ನಾಶ ಕೂಡ ರೈತರ ನಾಶಕ್ಕೆ ಕಾರಣವಾಗುತ್ತಿದೆ.
ಇನ್ನು ಕೆಲ ರೈತರು ತಮ್ಮ ಬುದ್ದಿಶಕ್ತಿಯಿಂದ ಇವತ್ತು ಕೋಟ್ಯಾಂತರ ರೂಪಾಯಿ ಸಂಪಾದನೆ ಕೂಡ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೇ ದಳ್ಳಾಳಿಗಳ ಜೊತೆನೂ ವ್ಯವಹಾರ ಮಾಡದೆ ತಾವೇ ಮಾರುಕಟ್ಟೆಗೆ ತಂದು ಮಾರಾಟ ಮಾಡಿ ಪರಿಪೂರ್ಣ ಲಾಭಾ ಮಾಡಿಕೊಳ್ಳುತ್ತಿದ್ದಾರೆ.