ಕಿಚ್ಚ ಸುದೀಪ್ ಮನೆ ಬಳಿ ಬಂದ ಕನ್ನಡದ ಯೂಟ್ಯೂಬರ್ ವಿಕಾಸ್ ಗೌಡ, ಒದ್ದು ಓಡಿಸಿದ ಸೆಕ್ಯೂರಿಟಿ

ಕನ್ನಡದ ಜನಪ್ರಿಯ ಯೂಟ್ಯೂಬರ್ ವಿಕಾಸ್ ಗೌಡ ಅವರು ದಿನಕ್ಕೊಂದು ಹೊಸ ರೀತಿಯ ವಿಡಿಯೋ ಮೂಲಕ ಕನ್ನಡಿಗರ ಮುಂದೆ ಬರುತ್ತಾರೆ. ಇವರ ಪ್ರತಿ ವಿಡಿಯೋ ಕೂಡ ಬಹಳ‌ ಅದ್ಭುತವಾಗಿರುತ್ತದೆ. ಕನ್ನಡದ ಸ್ಟಾರ್ ಯೂಟ್ಯೂಬರ್ ಗಳಲ್ಲಿ ಇವರು ಕೂಡ ಒಬ್ಬರು.

ಇನ್ನು ಇವತ್ತಿನ ವಿಕಾಸ್ ಗೌಡ ಯೂಟ್ಯೂಬ್ ನಲ್ಲಿ ಕನ್ನಡದ‌ ನಟರ ಮನೆ ಬಳಿ ಬಂದು ವಿಡಿಯೋ ಮಾಡಿಕೊಂಡಿದ್ದರು. ಈ ವೇಳೆ ಸುದೀಪ್ ಅವರ ಮನೆಮುಂದೆ ಬಂದಾಗ ಸೆಕ್ಯೂರಿಟಿ ಗಾರ್ಡ್ ಬಂದು ವಿಕಾಸ್ ಅವರನ್ನು ಇಲ್ಲಿಂದ ನಡಿ ಎಂದಿದ್ದಾರೆ. ಇನ್ನು ಕ್ಯಾಮೆರಾ ಮುಚ್ಚು ಎಂದಿದ್ದಾರೆ.

ಇನ್ನು ಯಶ್ ಅವರ ಮನೆ ಮುಂದೆ ಬಂದಿದ್ದ ವಿಕಾಸ್ ಅವರಿಗೆ ಅಲ್ಲಿನ ಸೆಕ್ಯೂರಿಟಿ ಯಾವುದೇ ಮಾಹಿತಿ ಕೊಟ್ಟಿಲ್ಲ‌.‌ ಇನ್ನು ರಿಯಲ್‌ ಸ್ಟಾರ್ ಉಪೇಂದ್ರ ಮನೆ ಮುಂದೆ ಬಂದ ವಿಕಾಸ್ ಅವರ ಬಳಿ ಅಲ್ಲಿನ ಸೆಕ್ಯೂರಿಟಿ ಅವರು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಉಪ್ಪಿ ಸರ್ ಬಗ್ಗೆ ಕೆಲ‌ ವಿಚಾರ ಹಂಚಿಕೊಂಡರು.