ಡ್ರೋನ್ ಪ್ರತಾಪ್ ಎಂದರೆ ಸಾಕು ಎಲ್ಲರಿಗೂ ನೆನಪಾಗುವುದು ಆತನ ಮೋಸದಾಟ. ಹೌದು, ಕರ್ನಾಟಕದ ಜನರಿಗೆ ಡ್ರೋನ್ ವಿಚಾರದಲ್ಲಿ ಸುಳ್ಳು ಹೇಳಿ ಇವತ್ತು ಮತ್ತೆ ನಾನು ಒಳ್ಳೆಯವ ಎಂಬ ನಾಟಕ ಮಾಡಿಕೊಂಡು ಬದುಕುತ್ತಿದ್ದಾರೆ ಡ್ರೋನ್ ಪ್ರತಾಪ್.
ಒಬ್ಬ ಮನುಷ್ಯ ಅಪ್ಪಟ ಬಂಗಾರ ಅಂದುಕೊಂಡು ನಂತರದಲ್ಲಿ ಆತ ಸುಳ್ಳುಗಾರ ಅಂತ ಗೊತ್ತಾದಾಗ ನಮ್ಮ ಹೃದಯವೇ ಚೂರುಗಳಾದಂತೆ. ಹಾಗೇಯೆ ಈ ಡ್ರೋನ್ ಪ್ರತಾಪ್ ಅವರ ನಿಜಬಣ್ಣ ತಿಳಿದಾಗ ಕನ್ನಡಿಗರ ನಂಬಿಕೆ ನುಚ್ಚುನೂರಾಗಿತ್ತು.
ಇನ್ನು ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆ ಸೇರಿದ ಬಳಿಕ ಮತ್ತೆ ಕನ್ನಡಿಗರ ಮನೆಮನ ಗೆದ್ದಿದ್ದರು. ಬಿಗ್ ಬಾಸ್ ಮನೆಯ ನೈಜ ಆಟ ನೋಡಿ ಫಿದಾ ಆಗಿದ್ದರು ವೀಕ್ಷಕರು. ಆದರೆ ಈತ ಅವತ್ತು ಮಾಡಿದ ವಂಚನೆ ಈಗಲೂ ಕೆಲ ಜನರ ಮನದಲ್ಲಿ ಉಳಿದುಕೊಂಡಿದೆ. ನಟ ಜಗ್ಗೇಶ್ ಸೇರಿ ಹಲವರಿಗೆ ಪಂಗನಾಮ ಹಾಕಿದ್ದಾನೆ ಈ ಡ್ರೋನ್ ಪ್ರತಾಪ್