ಯೂಟ್ಯೂಬ್ ಸ್ಟಾರ್ ಮಧು ಗೌಡ ಅವರು ಇತ್ತಿಚೆಗೆ ಮದುವೆಯಾಗಿ ಹನಿಮೂನ್ ಕೂಡ ಹೋಗಿದ್ದರು. ಭಾರತದ ಚಳಿ ಪ್ರದೇಶವಾದ ಮನಲಿಗೆ ಹೋಗಿ ಅಲ್ಲಿನ ಆ ದಿನದ ವಿಚಾರವನ್ನು ಯೂಟ್ಯೂಬ್ ಮೂಲಕ ಮಧು ಗೌಡ ಹಂಚಿಕೊಂಡಿದ್ದರು.
ಇನ್ನು ಈ ಮನಲಿಯಿಂದ ನೇರ ತಾಜ್ ಮಹಲ್ ಹಾಗೂ ಇನ್ನಿತರ ಭಾಗಗಳಿಗೂ ಹನಿಮೂನ್ ಟ್ರಿಪ್ ಹಾಕಿದ್ದರು. ಇನ್ನು ಈ ಜೋಡಿ ಮದುವೆ ಮುನ್ನ ಸಾಕಷ್ಟು ಪ್ಲಾನ್ ಮಾಡಿ ಮದುವೆಯಾಗಿದ್ದಾರೆ ಎಂಬುವುದು ಬೆಳಕಿಗೆ ಬಂದಿದೆ.
ಹೌದು, ಮಧು ಗೌಡ ಅವರು ಮದುವೆ ಮುನ್ನ ಭಾರತಾದ್ಯಂತ ಮೊದಲು ಪ್ರಯಾಣ ಮಾಡಿ ನಂತರದಲ್ಲಿ ವಿದೇಶ ಪ್ರವಾಸಕ್ಕೆ ಕೈ ಹೊಗೋಣ ಎಂದಿದ್ದಾರಂತೆ. ಒಟ್ಟಾರೆಯಾಗಿ ಈ ಜೋಡಿ ಇದೀಗ ಸಿಹಿಸುದ್ದಿಯೊಂದು ನೀಡಲಿದ್ದಾರೆ. ಹೌದು, ಇಷ್ಟು ದಿನ ಯೂಟ್ಯೂಬ್ ನಲ್ಲಿ ವಿಡಿಯೋ ಮಾಡುತ್ತಿದ್ದ ಮಧು ಗೌಡ ಇನ್ನುಮುಂದೆ ಹೊಸ ಬ್ಯುಸಿನೆಸ್ ಗೆ ಕೈಹಾಕುತ್ತಿದ್ದಾರಂತೆ.
ತನ್ನ ಗಂಡನ ಹಾಗೆ ನಾನು ಕೂಡ ಬ್ಯುಸಿನೆಸ್ ಮಾಡಬೇಕೆಂಬ ಹೊಸ ಆಲೋಚನೆ ಮಾಡಿದ್ದಾರೆ. ಹಾಗಾಗಿ ಇಷ್ಟು ದಿನ ವಿಡಿಯೋ ಮಾಡಿ ಸದ್ದು ಮಾಡುತ್ತಿದ್ದ ಮಧು, ಇನ್ನುಮುಂದೆ ಬ್ಯುಸಿನೆಸ್ ಮೂಲಕ ಸಕ್ಸಸ್ ಆಗಲಿದ್ದಾರೆ.