ಮೋಸದಿಂದ ಕ್ಯಾಪ್ಟನ್ ಆಗುವ ಅವಶ್ಯಕತೆ ಇಲ್ಲ, ಇವತ್ತಿಂದ ಭವ್ಯಾ ಕ್ಯಾಪ್ಟನ್ ಪಟ್ಟ ಹನುಮಂತನಿಗೆ ಕೊಟ್ಟ ಸುದೀಪ್

ನಿನ್ನೆ ನಡೆದ ಕ್ಯಾಪ್ಟನ್ಸ್ ಟಾಸ್ಕ್ ನಲ್ಲಿ ಭವ್ಯಾ ಗೌಡ ಅವರು ಮೋಸದ ಆಟವಾಡಿ ಗೆದ್ದಿದ್ದು ಎಲ್ಲರಿಗೂ ಗೊತ್ತಾಗಿದೆ. ಬಿಗ್ ಬಾಸ್ ವೀಕ್ಷಕರಿಗೂ ಭವ್ಯಾ ಗೌಡ ಮೋಸದಾಟವನ್ನು ಕಣ್ಣಾರೆ ನೋಡಿದ್ದಾರೆ. ಇನ್ನು ಆಪ್ತ ಸ್ನೇಹಿತ ತ್ರಿವಿಕ್ರಮ್ ಗೆ ಕೂಡ ಭವ್ಯಾ ಮೋಸ ಮಾಡಿದ್ದಾರೆ.

ಇನ್ನು ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಭವ್ಯಾ ಗೆದ್ದು ಕ್ಯಾಪ್ಟನ್ ಆಗಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಅವರ ಮೋಸದಾಟ ಇದೀಗ ಎಲ್ಲರ ಕಣ್ಣು ಕೆಂಪಗಾಗಿಸಿದೆ.

ಇನ್ನು ಇದರ ಜೊತೆ ವಾದ ಕಥೆ ಕಿಚ್ಚನ ಪಂಚಾಯತಿಯಲ್ಲಿ ಮೋಸದಾಟದ ಭವ್ಯಾ ಬಗ್ಗೆ ಕಿಚ್ಚ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಷ್ಟೇಯಲ್ಲದೆ, ಮೋಸ ಮಾಡಿ ಗೆದ್ದವರು ಯಾರು ಹೆಚ್ಚು ‌ದಿನ ಉಳಿದಿಲ್ಲ‌ ಎಂದಿದ್ದಾರೆ. ಇದರ ಜೊತೆಗೆ ಮುಂದಿನ ವಾರ ಬಿಗ್ ಬಾಸ್ ಕ್ಯಾಪ್ಟನ್ ಹನುಮಂತ ಎಂಬ ಮಾತು ಕೂಡ ಬಂದಿದೆ ಎನ್ನಲಾಗಿದೆ‌.