ಇತ್ತಿಚೆಗೆ ಚಿಕಿತ್ಸೆಗಾಗಿ ಅಮೆರಿಕಾ ದೇಶಕ್ಕೆ ಹೋಗಿದ್ದ ಶಿವಣ್ಣ ಕ್ಯಾನ್ಸರ್ ಖಾಯಿಲೆಗೆ ಶಾಶ್ವತ ಪರಿಹಾರಕ್ಕಾಗಿ ಸುಮಾರು ಮೂವತ್ತು ದಿನಗಳ ಕಾಲ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಹಾಗಾಗಿ ನಿನ್ನೆಯಷ್ಟೆ ಶಿವಣ್ಣ ಅವರಿಗೆ ಕ್ಯಾನ್ಸರ್ ಆಪರೇಷನ್ ಮಾಡಲಾಯಿತು.
ತದನಂತರ ಗೀತಕ್ಕ ಹಾಗೂ ಮಧು ಬಂಗಾರಪ್ಪ ಲೈವ್ ಮೂಲಕ ಅಮೆರಿಕಾದ ಡಾಕ್ಟರ್ ಬಳಿ ಶಿವಣ್ಣ ಅವರ ಆರೋಗ್ಯದ ಬಗ್ಗೆ ಸ್ಪಷ್ಟವಾಗಿ ವಿವರಿಸುವಂತೆ ಹೇಳಿದರು. ಇನ್ನು ಅಮೆರಿಕಾದ ಡಾಕ್ಟರ್ ಶಿವಣ್ಣ ಎನ್ನುತ್ತಲೇ ಬಹಳ ಪ್ರೀತಿಯಿಂದ ಶಿವಣ್ನ ಅವರ ಅರೋಗ್ಯದ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ.
ಇನ್ನು ಡಾಕ್ಟರ್ ಹೇಳುವ ಪ್ರಕಾರ ಶಿವಣ್ಣ ಅವರಿಗೆ ಸುಮಾರು ಒಂದು ತಿಂಗಳ ಬೆಡ್ ರೆಸ್ಟ್ ಬೇಕಾಂತೆ. ತದನಂತರ ಭಾರತಕ್ಕೆ ಮರಳಿ ಸಿನಿಮಾಗಳಲ್ಲಿ ಅಭಿನಯಿಸ ಬಹುದು ಎಂದಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮತ್ತೆ ಶಿವಣ್ಣ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ ಎಂದಿದ್ದಾರೆ ಡಾಕ್ಟರ್.