ಬಿಗ್ ಬಾಸ್ ಮನೆಯಿಂದ ನೇರ ಪೊಲೀಸರ ಠಾಣೆ ಮೆಟ್ಟಿಲೇರಿದ ರಜತ್, ಇದೀಗ ಬಿಗ್ ಬಾಸ್ ಮನೆಯಲ್ಲಿ ನೀರವ ಮೌನ ಕಾಡುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹೌದು, ರಜತ್ ಅವರು ಇದೀಗ ಅಧಿಕಾರಿ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ರಜತ್ ಅವರು ಬಿಗ್ ಬಾಸ್ ಮನೆಯಲ್ಲಿ ಸಿಕ್ಕಪಟ್ಟೆ ರೊಚ್ಚಿಗೆದ್ದು ಆಟವಾಡುತ್ತಿದ್ದರು. ಇನ್ನು ರಜತ್ ಅವರು ಆಟದ ನಡುವೆ ದುಡುಕಿನ ಮಾತಿನ ಮೂಲಕ ಸಹಸ್ಪರ್ಧಿಗಳ ಜೊತೆ ಕೆಟ್ಟ ಪದಬಳಕೆ ಮಾಡಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಇನ್ನು ರಜತ್ ಅವರು ಇತ್ತಿಚೆಗೆ ಧನರಾಜ್ ಜೊತೆ ಜಗಳ ಮಾಡಿಕೊಂಡು ದೊಡ್ಡ ಸದ್ದು ಮಾಡುತ್ತಿದ್ದರು. ಈ ಎಲ್ಲಾ ವಿಚಾರಕ್ಕೆ ರಜತ್ ಅವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಯಾವ ವಿಚಾರಕ್ಕೆ ರಜತ್ ಅವರನ್ನು ಅಧಿಕಾರಿಗಳು ವಿಚಾರ ಮಡುತ್ತಿದ್ದಾರೆ ಎಂಬುವುದು ತಿಳಿದು ಬಂದಿಲ್ಲ.