ಬಿಗ್ ಬಾಸ್ ಮರೆಯಲ್ಲಿ ನಿನ್ನೆ ನಡೆದ ಟಾಸ್ಕ್ ನಲ್ಲಿ ಒಬ್ಬರ ಮೇಲೆ ಒಬ್ಬರು ಹೊಡೆದಾಡಿಕೊಂಡು ಎದುರಾಳಿಯ ಕೈಯಲ್ಲಿದ್ದ ನೀರನ್ನು ಚೆಲ್ಲುವ ಆಟ ನೀಡಲಾಗಿತ್ತು. ಈ ವೇಳೆ ಭವ್ಯಾ ಗೌಡ ಕೈಯಲ್ಲಿದ್ದ ನೀರನ್ನು ಹನುಮಂತ ಚೆಲ್ಲಿದ್ದಾನೆ. ಆಗ ರೊಚ್ಚಿಗೆದ್ದ ಭವ್ಯಾ ಗೌಡ ಹನುಮಂತನಿಗೆ ಅಲ್ಲೇ ಇದ್ದ ಚೆಂಡಿನಿಂದ ಹನುಮಂತನಿಗೆ ಎಸೆದಿದ್ದಾರೆ.
ಇನ್ನು ಆಟದ ಸಮಯ ಯಾರ ಮೇಲೂ ಕೈಮಾಡಲು ಮುಂದಾದರೆ ಅವರ ಮೇಲೆ ಬಿಗ್ ಬಾಸ್ ಕ್ರಮ ಕೈಗೊಳ್ಳುತ್ತದೆ. ಹಾಗೇ ಈ ಬಾರಿ ಹನುಮಂತನ ಮೇಲೆ ಭವ್ಯಾ ಅವರು ಚೆಂಡು ಎಸೆದು ಆಟದ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇನ್ನು ಇದನ್ನು ಗಮನಿಸಿದ ಬಿಗ್ ಬಾಸ್ ಇದಕ್ಕೆ ತಕ್ಕ ಪ್ರಾಯಶ್ಚಿತ್ತ ನೀಡುತ್ತದೆ ಎಂದು ಹನುನಂತ ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ.
ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯ ಆಟದಲ್ಲಿ ಇದೀಗ ಹೊಡೆದಾಟ ಬಡಿದಾಟ ಹೆಚ್ಚಾಗುತ್ತಿದೆ. ಅದರಲ್ಲೂ ಕುರಿಗಾಯಿ ಹನುಮಂತನ ಮೇಲೆ ಭವ್ಯಾ ಗೌಡ ಅವರು ಪ್ರತಿ ಆಟದಲ್ಲೂ ಸಿಟ್ಟಿನಿಂದ ಇರುತ್ತಾರೆ.