ಐಶ್ವರ್ಯ ಅವರೇ ಮನೆಯಿಂದ ಹೊರ ಬನ್ನಿ ಎಂದ ಸುದೀಪ್, ವೀಕ್ಷಕರ‌ ಲೆಕ್ಕಾಚಾರ ಉಲ್ಟಾಪಲ್ಟಾ

ಬಿಗ್ ಬಾಸ್ ಮನೆಯಿಂದ ಈ ವಾರ ಐಶ್ವರ್ಯ ಅವರು ಹೊರಹೋಗಿರುವ ಮಾಹಿತಿ ಇದೀಗ ಬರುತ್ತಿದೆ. ನಿನ್ನೆಯಷ್ಟೆ ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಅವರು ಮೋಸದಾಟವಾಡಿ ಕ್ಯಾಪ್ಟನ್ ಆಗಿದ್ದರು. ಸದ್ಯ ಬಿಗ್ ಬಾಸ್ ವೀಕ್ಷಕರಿಗೆ ಇದೇ ವಿಚಾರ ಬಿಸಿಬಿಸಿ ಸುದ್ದಿಯಾಗಿದೆ.‌

ಇಂತಹ ಸಮಯದಲ್ಲಿ ಬೆಳ್ಳಿಗೊಂಬೆ ಐಶ್ವರ್ಯ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿರುವುದು ಆಘಾತ ತಂದಿದೆ. ಹೌದು, ಇಷ್ಟು ದಿನ ಐಶ್ವರ್ಯ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲವರ ಜೊತೆನೂ ಬಹಳ ಪ್ರೀತಿಯಿಂದ ಇದ್ದರು.‌ ಟಾಸ್ಕ್ ವಿಚಾರ ಬಂದಾಗ ಕೇವಲ ಬಾಯ್ ಮೂಲಕ‌ ಆಟವಾಡುತ್ತಿದ್ದರು.

ಆದರೆ, ಇಷ್ಟುದಿನ ಎಲಿಮಿನೇಷನ್ ಆದರೂ ಕೂಡ ವೀಕ್ಷಕರ ಮತದಿಂದ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದರು. ಆದರೆ ಇವತ್ತಿನ ಕಿಚ್ಚನ ಪಂಚಾಯತಿಯಲ್ಲಿ ಐಶ್ವರ್ಯ ಅವರು ಬಿಗ್ ಬಾಸ್ ಮನೆ ಬಿಡುವ ಪರಿಸ್ಥಿತಿ ಎದುರಾಗಿದೆ‌.