ತೆಲುಗು ಸಿನಿಮಾ ರಂಗದ ಸೂಪರ್ ಸ್ಟಾರ್ ನಟಿ ಕೀರ್ತಿ ಸುರೇಶ್ ಅವರು ಬಹುದಿನಗಳ ಗೆಳೆಯನ ಜೊತೆ ಮದುವೆಯಾಗಿದ್ದಾರೆ. ಧರ್ಮ ಜಾತಿ ಮತ ನೋಡದೆ ಆತನ ಮನಸ್ಸು ಹಾಗೂ ನಡತೆ ನೋಡಿ ಇದೀಗ ಕ್ರೈಸ್ತ ಧರ್ಮದ ಯುವಕನ ಜೊತೆ ಮದುವೆ ಮಾಡಿಕೊಂಡು ಸುದ್ದಿಯಲ್ಲಿದ್ದಾರೆ ಈ ಜೋಡಿ.
ಇನ್ನು ಕೀರ್ತಿ ಸುರೇಶ್ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿ. ಒಂದು ಸಿನಿಮಾ ಸುಮಾರು 5 ಕೋಟಿ ವರೆಗೂ ಸಂಭಾವನೆ ಪಡೆಯುತ್ತಾರೆ. ಜೊತೆಗೆ ಐಷಾರಾಮಿ ಜೀವನ, ನೆಚ್ಚಿನ ತಂದೆ ತಾಯಿ ಹಾಗೂ ಕುಟುಂಬದವರಿಗೂ ಕೀರ್ತಿ ಅಂದರೆ ಬಲು ಪ್ರೀತಿ.
ಕೀರ್ತಿ ಸುರೇಶ್ ಅವರನ್ನು ಮದುವೆಯಾದ ಈತ ಬ್ಯುಸಿನೆಸ್ ಮ್ಯಾನ್ ಎನ್ನಲಾಗಿದೆ. ಈತ ಕೂಡ ಕೋಟಿಯ ಕುಬೇರ, ದುಬೈ ಹಾಗೂ ಹಲವಾರು ದೇಶದಲ್ಲಿ ವ್ಯವಹಾರ ಇದೆ ಎನ್ನಲಾಗಿದೆ. ಇನ್ನು ಕೀರ್ತಿ ಸುರೇಶ್ ಅವರು ಈ ಮೊದಲು ಹಿಂದೂ ಸಂಸ್ಕೃತಿಯ ಮೂಲಕ ಮದುವೆಯಾಗಿ ನಂತರ ಕ್ರೈಸ್ತ ಧರ್ಮದ ಮೂಲಕ ಕೂಡ ಮದುವೆಯಾದರು.
ಇನ್ನು ಈ ಜೋಡಿ ಹನಿಮೂನ್ ಟ್ರಿಪ್ ಮಾಲ್ಡೀವ್ಸ್ ಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಪ್ರೀತಿಸಿದ ಗೆಳೆಯನ ಜೊತೆ ಕೀರ್ತಿ ತನ್ನ ಜೀವನದ ಮುಖ್ಯ ಜೀವನ ಕಳೆಯಲು ಮಾಲ್ಡೀವ್ಸ್ ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ.