ಜೀ ಕನ್ನಡದ ಸರಿಗಮಪ ವೇದಿಕೆಯಲ್ಲಿ ವಯಸ್ಸಾದ ವೃದ್ಧರೊಬ್ಬರ ಹಾಡಿಗೆ ಕನ್ನಡಿಗರು ಫಿದಾ ಅಗಿದ್ದಾರೆ. ಹೌದು, ಈ ಅಜ್ಜನ ಹಾಡು ಕೇಳಿ ಒಂದು ಕ್ಷಣ ಜಡ್ಜ್ ಕೂಡ ಶಾಕ್ ಆಗಿ ಬಿಟ್ಟಿದ್ದಾರೆ. ಬಾರೆ..ಬಾರೆ ಹಾಡಿನ ಮೂಲಕ ಇದೀಗ ಕರ್ನಾಟಕದಲ್ಲಿ ಈ ಅಜ್ಜನದ್ದೆ ಸದ್ದು.
ಡಾ| ರಾಜ್ ಕುಮಾರ್ ರವರ ಸಿನಿಮಾದ ಹಾಡಿಗೆ ರಾಜ್ ಕುಮಾರ್ ಅವರ ವಾಯ್ಸ್ ನಂತೆಯೇ ಹಾಡಿದ ಅಜ್ಜ. ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಅವರು ಮೌನವಾಗಿ ಕೇಳಿ ಕಣ್ಣಲ್ಲಿ ನೀರು ಹಾಕಿದ್ದಾರೆ.
ಹಾಡಿಗೆ ವಯಸ್ಸಿನ ಅಂತರ ಬೇಕಿಲ್ಲ, ಕಲೆ ಅನ್ನುವುದು ವ್ಯಾಪಾರ ಅಲ್ಲ ಅದೊಂದು ದೈವಶಕ್ತಿ ಅನ್ನುವುದು ಮತ್ತೊಮ್ಮೆ ಸಾಬೀತಾಯಿತು. ಇನ್ನು ಜೀ ಕನ್ನಡ ವೀಕ್ಷಕರು ಕೂಡ ಈ ಅಜ್ಜನ ಹಾಡಿಗೆ ಸಕ್ಕತ್ ಎಂಜಾಯ್ ಮಾಡಿದ್ದಾರೆ.