ಬಿಗ್ ಬಾಸ್ ಮನೆಯ ಐಶ್ವರ್ಯ ಅವರು ಕನ್ನಡ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಟ್ಟು ಬಹುವರ್ಷಗಳೆ ಕಳೆದಿದೆ. ಹೌದು, ಸೀರಿಯಲ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವ ಐಶ್ವರ್ಯ ಅವರು ಇದೀಗ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಇತ್ತಿಚೆಗೆ ಶಿಶಿರ್ ಜೊತೆ ಒಡನಾಟ ಇಟ್ಟುಕೊಂಡಿದ್ದ ಐಶ್ವರ್ಯ ಅವರು ಬಿಗ್ ಬಾಸ್ ವೀಕ್ಷಕರಿಗೆ ಹತ್ತಿರವಾಗಿದ್ದರು.
ಇನ್ನು ಐಶ್ವರ್ಯ ಅವರ ಬಿಗ್ ಬಾಸ್ ಆಟ ಕನ್ನಡಿಗರಿಗೆ ಬಹು ಇಷ್ಟವಾಗಿದೆ. ಹಾಗಾಗಿ ಈ ಬಾರಿ ಬಿಗ್ ಬಾಸ್ ವಿನ್ನರ್ ಐಶ್ವರ್ಯ ಅವರೇ ಆಗುತ್ತಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಇನ್ನು ಐಶ್ವರ್ಯ ಅವರು ಮೂಲತಃ ಚಿಕ್ಕಮಗಳೂರಿನವರು, ಕಲಾವಿದೆಯಾಗಲು ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ.
ಇನ್ನು ಇವರಿಗೆ ಅಪ್ಪ ಅಮ್ಮ ಯಾರು ಇಲ್ಲವೆಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದರು. ಇನ್ನು ಬೆಂಗಳೂರಿನಲ್ಲಿ ಐಷಾರಾಮಿ ಮನೆ ಕೂಡ ತೆಗೆದುಕೊಂಡಿದ್ದಾರೆ.