ಮೋಕ್ಷಿತಾ ಪೈ ಅವರು ಕಿಡ್ನಾಪ್ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದ ವಿಚಾರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಇದರ ನಿಜರೂಪ ಕಂಡಂತಹ ಯುವತಿ ಇದೀಗ ತನ್ನ ಅನುಭವವನ್ನು ಹೊರಹಾಕಿದ್ದಾಳೆ. ಮೂಲತಃ ಮಂಗಳೂರಿನ ಮೋಕ್ಷಿತಾ ಪೈ ಅವರು MBA ವ್ಯಾಸಂಗ ಮುಗಿಸಿ ತದನಂತರ ಬೆಂಗಳೂರಿಗೆ ಬಂದಿದ್ದರು.
ಬೆಂಗಳೂರಿಗೆ ಬಂದಿದ್ದ ಮೋಕ್ಷಿತಾ ಪೈ ಅವರಿಗೆ ಸದ್ಯಕ್ಕೆ IT ಕಂಪನಿಯಲ್ಲಿ ಉದ್ಯೋಗ ಸಿಕ್ಕಿವೆ. ತದನಂತರ ಅದೆ ಕಂಪನಿಯಲ್ಲಿ ಒಬ್ಬ ಸ್ನೇಹಿತನ ಪರಿಚಯವಾಗಿ ಮುಂದೆ ಪ್ರೀತಿ ಪ್ರೇಮಾ ಹಂಬಲಕ್ಕೆ ಬಿದ್ದಿದ್ದರು. ಇದಾದ ಬಳಿಕ ಈ ಬೆಂಗಳೂರಿನಲ್ಲಿ ದುಡ್ಡು ಇದ್ರೆ ಮಾತ್ರ ದುನಿಯಾದಲ್ಲಿ ಬದುಕಬಹುದು ಅಂತ ಈ ಇಬ್ಬರೂ ಕೂಡ ಹೊಸ ಪ್ಲಾನ್ ಮಾಡಿದ್ದರು.
ಇನ್ನು ಸಂಜೆ ವೇಳೆಗೆ ಮನೆಯಲ್ಲಿ ಸ್ಕೂಲ್ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ಮೋಕ್ಷಿತಾ ಅವರು ತನ್ನ ಪ್ಲಾನ್ ಇಲ್ಲಿ ವರ್ಕೌಟ್ ಮಾಡಲು ಮುಂದಾಗಿದ್ದರು. ಗೆಳೆಯನ ಜೊತೆ ಹಣಕ್ಕಾಗಿ ತನ್ನ ಬಳಿ ಇದ್ದ ಬಾಲಕಿಯನ್ನು ಕಿಡ್ನಾಪ್ ಮಾಡಲು ಪೂರ್ವ ತಯಾರಿ ನಡೆಸಿದರು. ತದನಂತರ ಈ ಬಾಲಕಿಯನ್ನು ಕಿಡ್ನಾಪ್ ಮಾಡಿ ಸಿಕ್ಕಿ ಹಾಕಿಕೊಂಡರು.
ಇನ್ನು ಇಷ್ಟೆಲ್ಲಾ ಎಡವಟ್ಟು ಮಾಡಿಕೊಂಡ ನಂತರವೂ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಟ್ಟು ತನ್ನ ಹೆಸರನ್ನೇ ಬದಲಾಯಿಸಿಕೊಂಡು ಅದೇ ಬೆಂಗಳೂರಿನಲ್ಲಿ ಇವತ್ತು ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಮೋಕ್ಷಿತಾ ಪೈ. ಇಷ್ಟು ಮಾತ್ರವಲ್ಲದೇ ಬಿಗ್ ಬಾಸ್ ಮನೆಯಲ್ಲಿ ತನ್ನ ಆಟದ ಮೂಲಕ ಬಿಗ್ ಬಾಸ್ ಗೆಲ್ಲಬೇಕು ಎಂದು ಪಣತೊಟ್ಟಂತೆ ಕಾಣುತ್ತಿದೆ.