ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರು ಕೂಡ ಜೊತೆಯಾಗಿ ಇದ್ದವರು. ಭವ್ಯಾ ಗೌಡ ಜೊತೆ ತ್ರಿವಿಕ್ರಮ್ ಸ್ವಲ್ಪ ಜಾಸ್ತಿನೇ ಹತ್ತಿರವಿರುತ್ತಿದ್ದ. ಆದರೆ ನಿನ್ನೆಯ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನನಗೆ ತ್ರಿವಿಕ್ರಮ್ ನಿಂದ ಸಮಸ್ಯೆ ಎಂದು ಕಿಚ್ಚನ ಮುಂದೆ ಬಹಿರಂಗವಾಗಿ ಹೇಳಿಕೊಂಡ ಭವ್ಯಾ ಗೌಡ.
ಇನ್ನು ತ್ರಿವಿಕ್ರಮ್ ಅವರು ಭವ್ಯಾ ಮಾತಿಗೆ ಕೋಪಗೊಂಡಿದ್ದಾರೆ. ಜೊತೆಯಲ್ಲೇ ಇದ್ದು ಬೆನ್ನಿಗೆ ಗೂಟ ಇಡೋರ ಜೊತೆ ನಾನು ಇರಲ್ಲ ಎಂದಿದ್ದಾರೆ. ಇನ್ನು ಪಿನಾಲೆ ಹತ್ತಿರವಾಗುತ್ತಿದ್ದಂತೆ ಮನೆಯ ಸ್ಪರ್ಧಿಗಳು ಫಿನಾಲೆ ಮೇಲೆ ಕಣ್ಣು ಹಾಕಿದ್ದಾರೆ. ಈ ವೇಳೆ ತಮ್ಮ ಜೊತೆ ಇರುವವರನ್ನು ಕೂಡ ಎಲಿಮಿನೇಷನ್ ಮಾಡಲು ಹಿಂದೆಮುಂದೆ ನೋಡುತ್ತಿಲ್ಲ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಈ ವಾರ ಚೈತ್ರ ಕುಂದಾಪುರ ಮನೆಯಿಂದ ಹೊರಹೋಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಈ ವಾರ ಚೈತ್ರ ಕುಂದಾಪುರ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸಿಲುಕಿದ್ದಾರೆ. ಇನ್ನು ಚೈತ್ರ ಬಿಟ್ಟು ಗೌತಮಿ ಅವರು ಮನೆಯಿಂದ ಹೊರಹೋಗಬಹುದು ಎಂಬುವುದು ವೀಕ್ಷಕರ ಅಭಿಪ್ರಾಯವಾಗಿದೆ.