ಕನ್ನಡದ ಸೀರಿಯಲ್ ನಟ ಶೋಭರಾಜ್ ಪವೂರ್ ರವರ ಧರ್ಮ ಪತ್ನಿಯೂ ರಾತ್ರೋರಾತ್ರಿ ಬೆಂಗಳೂರಿಗೆ ಬರುವ ಹಿನ್ನೆಲೆ Online ಮೂಲಕ ಬಸ್ ಬುಕ್ಕಿಂಗ್ ಮಾಡಿದ್ದರು. ಬಸ್ ಬುಕ್ಕಿಂಗ್ ಮಾಡಿದ ಸಮಯಕ್ಕೆ ನಿಲ್ದಾಣದ ಬಳಿ ಕಾಯಿತ್ತಿದ್ದ ಶೋಭರಾಜ್ ಪತ್ನಿಗೆ ಆಘಾತವೊಂದು ಕಾದಿತ್ತು.
ಹೌದು, ಸೀರಿಯಲ್ ನಟನ ಪತ್ನಿ ರಾತ್ರಿಯ ಹೊತ್ತು ಬಸ್ ಬುಕ್ಕಿಂಗ್ ಮಾಡಿ ಪ್ರಯಾಣ ಬೆಳೆಸಿದ ಸ್ಪಲ್ಪ ಸಮಯದಲ್ಲೇ ಕಿರುಕುಳ ಉಂಟಾಗಿದೆ. ಈ ಕಿರುಕುಳಕ್ಕೆ ಬೇಸತ್ತು, ಈ ದಂಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಜೊತೆಗೆ ಒಂದು ಲಕ್ಷ ಪರಿಹಾರ ಕೂಡ ನೀಡಬೇಕು ಎಂದಿದ್ದಾರಂತೆ.
ಇನ್ನು ಈ ಬಸ್ಸಿನಲ್ಲಿ ಆದ ಕಿರುಕುಳ ಏನೆಂದರೆ, ಶೋಭಾರಾಜ್ ಅವರ ಪತ್ನಿ ಕೂತಿದ್ದ Seat ನಲ್ಲಿ ತಿಗಣೆ ಕಾಟ ಇತ್ತಂತೆ. ಹಾಗಾಗಿ ಈ ಶೋಭಾ ರಾಜ್ ಪತ್ನಿಗೆ ಬೆಳಗ್ಗೆ ಜಾವದ ವರೆಗೂ ಹಿಂಸೆಯಾಗಿದೆ ಎನ್ನಲಾಗಿದೆ.