ಈಗಿನ ಕಾಲದಲ್ಲಿ ಬಡವರಿಗೆ ಬಟ್ಟೆ ಖರೀದಿ ಎಂದರೆ ದೊಡ್ಡ ತಲೆನೋವಾಗಿಬಿಟ್ಟಿದೆ. ಹೌದು, ಈ ಬಡ ಕುಟುಂಬದ ಜನರಿಗೆ ದಿನವಿಡೀ ದುಡಿದ ಹಣದಲ್ಲಿ ಬಟ್ಟೆ ಖರೀದಿಸಲು ಸಾಧ್ಯವಾಗದೆ ಇಂತಹ ಕೆಲಸ ಕೈ ಹಾಕಿ ಸಿಕ್ಕಿಬಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ.
ಹೌದು, ಮಧ್ಯಪ್ರದೇಶದ ಬಟ್ಟೆ ಅಂಗಡಿಯಲ್ಲಿ ಇಬ್ಬರು ಮಹಿಳೆಯರು ಬಟ್ಟೆ ಖರೀದಿಗೆ ಬಟ್ಟೆ ಅಂಗಡಿಗೆ ಬರುತ್ತಾರೆ. ಈ ಮಹಿಳೆಯರು ಬಟ್ಟೆ ಖರೀದಿಗೆಂದು ಬಂದು ಕಳ್ಳತನ ಮಾಡುವ ದೃಶ್ಯವೊಂದು ಸಿಸಿಟಿವಿಯಲ್ಲಿ ಕಂಡುಬಂದಿದೆ.
ಸುಮಾರು ಎರಡು ಸಾವಿರ ಬೆಲೆ ಬಾಳುವ ಸೀರೆಯನ್ನು ನೋಡಲ ಮುಂದಾಗುತ್ತಾರೆ, ಈ ವೇಳೆ ಅಲ್ಲೇ ಇದ್ದ ಸಿಬ್ಬಂದಿ ಇವರಿಗೆ ಸೀರೆ ತೋರಿಸುತ್ತಾರೆ. ತದನಂತರ ಈ ಮಹಿಳೆಯರು ಅಲ್ಲಿದ್ದ ಯುವಕ ಆಚೆಗೆ ಹೋದ ತಕ್ಷಣ ಸೀರೆಯನ್ನು ತನ್ನ ಉಟ್ಟ ಸೀರೆ ಒಳಗಡೆ ಹಾಕಿ ಎಸ್ಕೇಪ್ ಆಗುತ್ತಾರೆ.
ಇನ್ನು ಈ ಮಹಿಳೆಯರು ಸ್ವಲ್ಪ ದಿನಗಳ ನಂತರ ಪೊಲೀಸರ ಕೈಗೆ ಸಿಗುತ್ತಾರೆ. ಈ ಮಹಿಳೆಯರು ಈ ರೀತಿ ಮಾಡಲು ಅವರ ಮನೆಯ ಬಡತನ ಎಂಬುವುದು ಸ್ಪಷ್ಟವಾಗಿದೆ.