ಸ್ವಿಮ್ಮಿಂಗ್ ಪೂಲ್ ಗೆ ಹಾರಿದ ಐಶ್ವರ್ಯ ಭಾವ್ಯ ಹಾಗೂ ಗೌತಮಿ, ಬಾಯ್ ಬಿಟ್ಟು ನೋಡಿದ ತ್ರಿವಿಕ್ರಮ್

ಬಿಗ್‌ಬಾಸ್‌ ಕನ್ನಡ 11ರ ಈ ವಾರದ ಮನೆಯ ಕಳಪೆ ಧನ್‌ರಾಜ್‌ ಪಾಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಗೇಮ್‌ ನಲ್ಲಿ ಹೀನಾಯವಾಗಿ ಸೋತ ತಂಡಗಳಿಗೆ ಸಿಗದ ಕಳಪೆ ಧನ್‌ರಾಜ್ ಗೆ ಹೇಗೆ ಸಿಕ್ಕಿತ್ತು, ಜೊತೆಗೆ ಮೋಕ್ಷಿತಾ ಅವರು ಊಸರವಳ್ಳಿ ಎಂದೆಲ್ಲ ಕಮೆಂಟ್‌ ಬರುತ್ತಿದೆ.

ಮೊದಲ ಸ್ಥಾನ 600 ಅಂಕ ಪಡೆದ ಹನುಮಂತು-ಗೌತಮಿ, ಎರಡನೇ ಸ್ಥಾನ ಭವ್ಯಾ-ತ್ರಿವಿಕ್ರಮ್‌ 500 ಅಂಕ, ಮೂರನೇ ಸ್ಥಾನ ಚೈತ್ರಾ-ಶಿಶಿರ್‌ 350 ಅಂಕ, 4ನೇ ಸ್ಥಾನ ಧನು-ಮೋಕ್ಷಿತಾ 325 ಅಂಕ, ಐದನೇ ಸ್ಥಾನ ಅನುಷಾ-ಸುರೇಶ್ 275 ಅಂಕ,  ಮತ್ತು ಕೊನೆ ಸ್ಥಾನ ಧರ್ಮ-ಐಶ್ವರ್ಯಾ 250 ಅಂಕ. ಕೊನೆಯ ಸ್ಥಾನ ಪಡೆದ 2 ಜೋಡಿಗಳಲ್ಲಿ ಯಾರು ಕಳಪೆಗೆ ಹೋಗದೆ ಇದುವುದೇ ಆಶ್ಚರ್ಯ ತರಿಸಿದೆ. ಆದರೆ ಮೋಕ್ಷಿತಾ ಅವರು ತನ್ನದೇ ಜೋಡಿ ಧನುವನ್ನು ಕಳಪೆಗೆ ಹಾಕಿದರು. 

ಇನ್ನು ಇತ್ತ ಕಡೆ ವಾದ ಪ್ರತಿವಾದ ನಡೆದು ಅಹಂಕಾರ ಎಂದು ಧನ್‌ರಾಜ್‌ ಪದ ಬಳಕೆ ಮಾಡಿದರು. ಇದು ಇಷ್ಟವಾಗದೆ ನನಗೆ ಅಹಂಕಾರ ಇದೆಯಾ ಶಿಶಿರ್‌ ಎಂದು ಮೋಕ್ಷಿತಾ ಕೇಳಿದರು. ಅಹಂಕಾರ ಅಂದ್ರೆ ನೀವೇ ಹೇಳಿ ಡಾಮಿನೇಟ್‌ ಮಾಡ್ತೀನಾ ನಾನು ಎಂದು ಹೇಳಿಕೊಂಡು ಅತ್ತರು. ಆದ್ರೆ ವೀಕ್ಷಕರ ಅಭಿಪ್ರಾಯ ಅಹಂಕಾರ ಇರುವಾಗ ಮೋಕ್ಷಿತಾಗೆ ಈ ಪದ ಬಳಕೆ ಮಾಡಿದ್ದು ಸರಿ ಇದೆ. ಅದೇ ನೀವು ಗೋಮುಖ ವ್ಯಾಘ್ರ ಎಂಬ ಪದವನ್ನು ತ್ರಿವಿಕ್ರಮ್‌ ವಿರುದ್ಧ ಬಳಸಿದ್ದು ಎಷ್ಟು ಸರಿ ಎಂದು ಕೇಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಮೆಂಟ್‌ ಗಳು ಈ ಬಗ್ಗೆ ಬರುತ್ತಿದೆ. ಮೀಮ್ಸ್ ಗಳು ಕ್ರಿಯೇಟ್ ಆಗಿದೆ. ಇಲ್ಲಿ ಈ ಸನ್ನಿವೇಶದ ಬಗ್ಗೆ ವೀಕ್ಷಕರ ಕಮೆಂಟ್‌ ಗಳನ್ನು ಈ ಕೆಳಗೆ  ನೀಡಲಾಗಿದೆ. ಇನ್ನು ಧನರಾಜ್ ಪತ್ನಿ ಪ್ರಜ್ಞಾ ಕೂಡ ಈ ಕುರಿತಾಗಿ ಬೇಸರ ಹೊರಹಾಕಿದ್ದಾರೆ. ಎಲ್ಲ ಸೇರಿ ಧನರಾಜ್ ಅವರನ್ನ ಟಾಗೇಟ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *