ಹಳ್ಳಿ ಹುಡುಗ ಬಿಗ್ ಬಾಸ್ ಮನೆಯಲ್ಲಿ ಇಷ್ಟರ ಮಟ್ಟಿಗೆ ಸದ್ದು ಮಾಡುತ್ತಿರುವುದು ನಿಜಕ್ಕೂ ಕನ್ನಡಿಗರು ಮೆಚ್ಚುವಂತ ಕೆಲಸ. ಹೌದು, ಕುರುಗಾಯಿ ಹನುಮ ಇವತ್ತು ಬಿಗ್ ಬಾಸ್ ಮನೆಮಂದಿ ಜೊತೆ ಚಾಣಾಕ್ಷದಿಂದ ಮಾತನಾಡುತ್ತಿದ್ದಾರೆ.
ವೈಲ್ಡ್ ಕಾರ್ಡ್ ಎಂಟ್ರಿ ಆದಾಗ ಹನುಮಂತನ ಮುಗ್ಧತೆ ಕಂಡು ಬಿಗ್ ಬಾಸ್ ಮಂದಿ ದೊಡ್ಡ ವಿಚಾರ ಮಾಡಿಕೊಂಡಿಲ್ಲ. ಈತ ಇದ್ದರೆ ಒಂದು ವಾರ ಇರ್ತಾನೆ ಅಂತ ನಂಬಿದ್ದರು. ಆದರೆ ಹನುಮಂತ ಬಿಗ್ ಬಾಸ್ ಮನೆ ಸೇರಿ ಒಂದೇ ವಾರದಲ್ಲಿ ಸಹ ಸ್ಪರ್ಧಿಗಳ ಜೊತೆ ಸಮಾನವಾಗಿ ಆಡುತ್ತಿದ್ದಾರೆ.
ಹೌದು, ಹನುಮನ ಚಾಣಾಕ್ಷ ಬುದ್ದಿವಂತಿಕೆ ಹಾಗೂ ಆತನ ಆಟದ ವಿಚಾರಕ್ಕೆ ಬಿಗ್ ಬಾಸ್ ಮಂದಿಗೆ ಸಾಕಷ್ಟು ಮನರಂಜನ ಸಿಗುತ್ತಿದೆ. ಹಾಗಾಗಿ ಹನುಮಂತನಿಗೆ ಕನ್ನಡಿಗರು ಮತ ಹಾಕಿ ಇವತ್ತಿನವರೆಗೂ ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಂಡಿದ್ದಾರೆ.