ಹನುಮಂತನ ಊರಲ್ಲಿ ಕಿಚ್ಚನಿಗೆ ಮಂಗಳಾರತಿ ಮಾಡಿದ ಬಿಗ್ ಬಾಸ್ ವೀಕ್ಷಕರು

ಬಿಗ್ ಬಾಸ್ ಮನೆಯಲ್ಲಿ ‌ಕುರಿಗಾಯಿ ಹನುಮಂತನ ಆಟ ಇದೀಗ ಬಿಗ್ ಬಾಸ್ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಹಾಗಾಗಿ ಬಿಗ್ ಬಾಸ್ ನೋಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇನ್ನು ಬಿಗ್ ಬಾಸ್ ಕೊಟ್ಟ ಯಾವುದೇ ಟಾಸ್ಕ್ ಇರಲಿ‌ ಅದನ್ನು ಸರಿಯಾಗಿ ಅಲೋಚಿಸಿ ಆಟವಾಡುತ್ತಾರೆ.

ಇನ್ನು ಹನುಮಂತನ ಚುರುಕು ಬುದ್ದಿವಂತಿಕೆ‌‌ ಹಾಗೂ ಎಲಿಮಿನೇಷನ್ ಸಂದರ್ಭದಲ್ಲಿ ಬಿಗ್ಬ್ಬಾಸ್ ಮನೆಯಿಂದ weak ಆಗಿರುವ ಸ್ಪರ್ಧಿಯ ಹೆಸರನ್ನು ಓಪನ್ ಆಗಿ ಹೇಳಿಬಿಡುತ್ತಾರೆ. ಈ ರೀತಿಯಾಗಿ ಹನುಮಂತನ ಆಟ ಬಿಗ್ಬ್ಬಾಸ್ ವೀಕ್ಷಕರಿಗೆ ಮಜಾ ತಂದಿದೆ.‌

ಇನ್ನು ಇತ್ತಿಚೆಗೆ ಬಿಗ್ ಬಾಸ್ ಮನೆ ಒಳಗಡೆ ಹನುಮಂತ ಕೂಡ ಮನೆಯಿಂದ ಹೊರಹೋಗುವುದಾಗಿ ಮಾತನಾಡಿದ್ದರು. ನನಗೇನು ಇಲ್ಲಿ ಇರಬೇಕು ಅಂತೇನಿಲ್ಲ ಎಂದಿದ್ದರು. ಇದನ್ನು ಕಂಡ ಸುದೀಪ್ ಅವರು ‘ ಹನುನಂತ ಸಿಕ್ಕ ಅವಕಾಶ ಬಳಸಿಕೋ, ಅದು ಬಿಟ್ಟು ಗಾಂಚಲಿ ಮಾಡಬೇಡ ಎಂದು ಗದರಿಸಿದ್ದರು. ಇದೀಗ ಹನುಮಂತನ ಊರಿನಲ್ಲಿ ಕಿಚ್ಚನ ಮೇಲೆ ಬಿಗ್ ಬಾಸ್ ವೀಕ್ಷಕರು ಗರಂ ಆಗಿದ್ದಾರೆ.