ಬೆಳಗಾವಿ ವಿಧಾನಸಭೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ರವರ ಮೇಲೆ ಸಿಟಿ ರವಿ ಅವರು ಹೇಳಿದ ಮಾತು ಇದೀಗ ದೊಡ್ಡ ವಿಚಾರವಾಗಿ ಹೊರಹೊಮ್ಮಿದೆ. ಹೌದು, ಬೆಳಗಾವಿಯಲ್ಲಿ ಸಿಟಿ ರವಿ ಮಾತಿಗೆ ರೊಚ್ಚಿಗೆದ್ದು ನಿಂತ ಲಕ್ಷ್ಮಿ ಹೆಬ್ಬಾಳ್ಕರ್ ರವರ ಬೆಂಬಲಿಗರು.
ಇನ್ನು ಸಿಟಿ ರವಿ ಅವರು ವಿಧಾನಸಭೆಯಲ್ಲಿ ಅಧಿವೇಶನ ಮುಗಿಸಿ ಹೊರಬರುವಾಗ ಲಕ್ಷ್ನಿ ಹೆಬ್ಬಾಳ್ಕರ್ ಅವರ ಪಿಎ ಹಾಗೂ ಅವರ ಸಹಚರರು ಸಿಟಿ ರವಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿ ಇದೀಗ ದೊಡ್ಡ ಜಗಳವೇ ನಡೆದಿದೆ.
ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಟಿ ರವಿ ವಿರುದ್ಧ ದೂರು ದಾಖಲಿಸಿದ್ದಾರೆ. ಇನ್ನು ಸಿಟಿ ರವಿ ಅವರು ಅಧಿವೇಶನದಿಂದ ಹೊರಬರುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರಾಗಲು ಮುಂದಾಗುದ್ದಾರೆ. ಇನ್ನು ಸಿಟಿ ರವಿ ಅವರನ್ನು ಪುತ್ತೂರು MLC ಕಿಶೋರ್ ಕುಮಾರ್ ಅವರು ಸಿಟಿ ರವಿ ಅವರನ್ನು ಲಕ್ಷ್ಮಿ ಹೆಬ್ಬಾಳ್ಕರ್ ರವರ ಸಹಚರರಿಂದ ಸಿಟಿ ರವಿ ಅವರನ್ನು ಬಚಾವು ಮಾಡಿದ್ದಾರೆ.
ಒಂದು ವೇಳೆ ಪುತ್ತೂರಿನ MLC ಕಿಶೋರ್ ಕುಮಾರ್ ಇಲ್ಲದಿದ್ದರೆ ಸಿಟಿ ರವಿ ಅವರಿಗೆ ಬೆಳಗಾವಿ ಅಧಿವೇಶನದ ಹೊರಗಡೆ ಏಟು ಬೀಳುವ ಎಲ್ಲಾ ಸಾಧ್ಯತೆಗಳೂ ಇತ್ತು. ಇನ್ನು ಸಿಟಿ ರವಿ ಅವರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ಜಗಳಕ್ಕೆ ಸರಿಯಾದ ಉತ್ತರವನ್ನು ಕೋರ್ಟ್ ನೀಡಲಿದೆ.