CT Ravi ಹೆಣ್ಣುಮಕ್ಕಳಿಗೆ ಬೆಲೆ ಕೊಡಲ್ವಾ, ಅಸಲಿ ಮುಖವಾಡ ಕಳಚಿದ ಧರ್ಮಪತ್ನಿ

CT ರವಿ ಅವರ ಮೇಲೆ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರೋಪ ಮಾಡಿದ ವಿಚಾರ ಇದೀಗ ರಾಜ್ಯಾದ್ಯಂತ ಬಾರಿ ಸದ್ದು ಮಾಡುತ್ತಿದೆ‌. ಇದೀಗ ಈ ವಿಚಾರ ಕೇಂದ್ರ ಸರ್ಕಾರಕ್ಕೂ ಮುಟ್ಟಿದೆ ಎನ್ನಲಾಗಿದೆ. ಸದನದಎ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ನೇರ ನೇರ ಮಾತಿನ ಚಕಮಕಿ ನಡುವೆ ಸಿಟಿ ರವಿ ಬಾಯ್ ತಪ್ಪಿ ಕೆಟ್ಟ ಪದ ಬಳಕೆಯಿಂದ ಇವತ್ತು ಇಷ್ಟು ದೊಡ್ಡ ಮಟ್ಟದಲ್ಲಿ ವಾದವಿವಾದಗಳು ಸೃಷ್ಟಿ ಆಗಿವೆ.

ಇನ್ನು ಒಂದು ‌ದಿನದ ಮಟ್ಟಿಗೆ ಪೊಲೀಸರ ಜೊತೆಗಿದ್ದ ಸಿಟಿ ರವಿ ಅವರು ಇದೀಗ ಕೋರ್ಟ್ ಬಿಡುಗಡೆ ಭಾಗ್ಯ ಕೊಟ್ಟಿದೆ. ಇದರ ಜೊತೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹಚರರ ಮೇಲೂ ಕ್ರಮ ಕೈಗೊಳ್ಳಲು ಸಿಟಿ ರವಿ ಮನವಿ ಮಾಡಿದ್ದಾರೆ. ಇನ್ನು ಸಿಟಿ ರವಿ ಅವರಿಗೆ ಬೇಲ್ ಸಿಗುತ್ತಿದ್ದಂತೆ ಅವರ ಚಿಕ್ಕಮಗಳೂರು ಮನೆಗೆ ಮಾಧ್ಯಮಗಳು ಬೇಟಿ ನೀಡಿವೆ.

ಈ ವೇಳೆ ತನ್ನ ಗಂಡನ ಬಗೆ ಸಿಟಿ ರವಿ ಪತ್ನಿ ಮೌನಮುರಿದಿದ್ದಾರೆ. ನನ್ನ ಗಂಡನ ಸದನದಲ್ಲಿ ಇಂತಹ ಅಸಹ್ಯ ಪದಬಳಕೆ ಮಾಡಲು ಸಾಧ್ಯವಿಲ್ಲ. ಸುಮಾರು 25 ವರ್ಷ ಅವರ ಜೊತೆ ಸಂಸಾರ ಮಾಡಿರುವ ನನಗೆ ಅವರು ಏನು ಎಂತ ಗೊತ್ತಿದೆ.

ಇಷ್ಟು ವರ್ಷಗಳ ಕಾಲ ಒಂದೇ ಒಂದು ಕೆಟ್ಟ ಪದಬಳಕೆ ಮಾಡಿಲ್ಲ. ಅವರ ಮಗುವಿಗಾಗಲಿ ಅಥವಾ ನನಗಾಗಲಿ ಇದುವರೆಗೂ ಕೆಟ್ಟ ಪದಬಳಕೆ ಬಂದಿಲ್ಲ. ಇನ್ನು ಚಿಕ್ಕಮಗಳೂರು ಜನರ ಬಳಿ ಬೇಕಾದರೂ ಕೇಳಿ ಎಂದಿದ್ದಾರೆ‌.

Leave a Reply

Your email address will not be published. Required fields are marked *