ಬಿಗ್ ಬಾಸ್ ಮನೆಯಿಂದ ಏಕಾಏಕಿ ತ್ರಿವಿಕ್ರಮ್ ಹೊರಬಂದಿದ್ದು ಇದೀಗ ವೀಕ್ಷಕರಲ್ಲಿ ಬಾರಿ ಬೇಸರ ಉಂಟು ಮಾಡಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಅವರು ಆಟದ ವಿಚಾರ ಬಂದಾಗ ಸಾಕಷ್ಟು ಶ್ರಮ ಹಾಕಿ ಆಟವಾಡುತ್ತಿದ್ದರು. ಬಿಗ್ ಬಾಸ್ ಕೊಟ್ಟ ಅದು ಯಾವ ಆಟವೇ ಆಗಿರಲಿ ಅದರಲ್ಲಿ ತ್ರಿವಿಕ್ರಮ್ ಅವರು ಗೆಲ್ಲುತ್ತಿದ್ದರು.
ಇನ್ನು ತ್ರಿವಿಕ್ರಮ್ ಅವರಿಗೆ ಚೈತ್ರ ಕುಂದಾಪುರ ಅವರ ಬಳಿ ಬಿಟ್ಟು ಬೇರೆ ಎಲ್ಲರ ಜೊತೆನೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಆದರೆ ಇದೀಗ ತ್ರಿಎ ಅವರನ್ನು ಬಿಗ್ ಬಾಸ್ ಮನೆಯಿಂದ ಯಾಕೆ ಹೊರಹಾಕಿದ್ದಾರೆ ಎಂಬುವುದೇ ಕುತೂಹಲದ ಪ್ರಶ್ನೆಯಾಗಿದೆ. ಇನ್ನು ಮಾತಿನ ಪಟಾಕಿ ಐಶ್ವರ್ಯ ಅವರು ಹೋಗಬೇಕಿತ್ತು ಅಂತ ಕೆಲ ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು.
ಆದರೆ ನಿನ್ನೆಯ ಬಿಗ್ ಬಾಸ್ ಎಲಿಮಿನೇಷನ್ ಯಾರಿಗೂ ಅಷ್ಟು ದೊಡ್ಡ ಮಟ್ಟದ ತೃಪ್ತಿ ತಂದಿಲ್ಲ. ತ್ರಿವಿಕ್ರಮ್ ಅವರನ್ನು ಹೊರಹಾಕುವ ಸನ್ನಿವೇಶ ಯಾಕೆ ಬಂದು ಎಂಬುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ. ಇನ್ನು ತ್ರಿವಿಕ್ರಮ್ ಅವರನ್ನು ಸೀಕ್ರೇಟ್ ರೂಮ್ ನಲ್ಲಿ ಇರಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ತ್ರಿವಿಕ್ರಮ್ ಅವರು ಮತ್ತೆ ಬರಲ್ಲ ಎಂಬುವುದು ಕೂಡ ಸ್ಪಷ್ಟವಿದೆ.
ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಭವ್ಯ ಗೌಡ ಹಾಗೂ ರಜತ್ ಅವರಿಗೆ ತ್ರಿವಿಕ್ರಮ್ ಹೊರಹೋಗಿದ್ದು ತೀರಾ ಬೇಸರ ಸಂಗತಿಯಾಗಿದೆ. ಇಷ್ಟು ದಿನ ಜೊತೆಗಿದ್ದ ತ್ರಿವಿಕ್ರಮ್ ಇದೀಗ ಇಲ್ಲ ಎಂದಾಗ ಭವ್ಯ ಗೌಡ ಅವರು ತೀರಾ ಕಂಗಾಲಾಗಿದ್ದಾರೆ.