ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟ ತ್ರಿವಿಕ್ರಮ್, ಮೋಕ್ಷಿತಾ ಪೈ ಆಸೆ ನಿರಾಸೆ

ಬಿಗ್ ಬಾಸ್ ಮನೆಯಿಂದ ತ್ರಿವಿಕ್ರಮ್ ಅವರು ನಿನ್ನೆಯಷ್ಟೆ ಹೊರಬಂದಿದ್ದರು‌ ಆದರೆ ಇದೀಗ ಮತ್ತೆ ಮನೆ ಒಳಗಡೆ ಹೋಗಿದ್ದಾರೆ ಎಂಬ ವಿಚಾರ ಹೊರಬರುತ್ತಿದೆ. ಹೌದು, ತ್ರಿವಿಕ್ರಮ್ ಅವರ ಆಟ ಹಾಗೂ ಬಿಗ್ ಬಾಸ್ ಮನೆ ಒಳಗಡೆ ಇದ್ದ ರೀತಿ‌ ನೋಡಿ ಹಲವಾರು ವೀಕ್ಷಕರು ಮೆಚ್ಚುಗೆ ಹೊರಹಾಕಿದ್ದರು.

ಆದರೆ, ಬಿಗ್ ಬಾಸ್ ಮಾತ್ರ ಬೇರೆಯೇ ನಿರ್ಧಾರ ಕೈಗೊಂಡಿತ್ತು. ಆದರೆ, ಇದೀಗ ತ್ರಿವಿಕ್ರಮ್ ಅವರು ಸೀಕ್ರೇಟ್ ರೂಮ್ ಮೂಲಕ ಮತ್ತೆ ಬಿಗ್ ಬಾಸ್ ಮನೆ ಒಳಗಡೆ ಬಂದಿದ್ದಾರೆ‌. ಇನ್ನು ತ್ರಿವಿಕ್ರಮ್ ಅವರು ಮನೆ ಒಳಗಡೆ ಬರುತ್ತಿದ್ದಂತೆ ಮೋಕ್ಷಿತಾ ಪೈ ಅವರಿಗೆ ಮತ್ತೆ ತಲೆನೋವು ಎದ್ದಿದೆ ಅಂತೆ.

ಹೌದು, ತ್ರಿವಿಕ್ರಮ್ ಹಾಗೂ ಭವ್ಯ ಅವರ ಆಟದ ನಡುವೆ ಮೋಕ್ಷಿತಾ ಪೈ ಅವರು ಸೈಲೆಂಟ್ ಆಗಿದ್ದರು‌. ಆದರೆ ನಿನ್ನೆ ತ್ರಿವಿಕ್ರಮ್ ಹೊರಹೋಗಿದ್ದನ್ನು ನೋಡಿ ಮೋಕ್ಷಿತಾ ಪೈ ಅವರು ಸಂತೋಷದ ಮುಖ ಹೊಂದಿದ್ದರು‌.

ಆದರೆ ಇದೀಗ ತ್ರಿವಿಕ್ರಮ್ ಮತ್ತೆ ರೀ ಎಂಟ್ರಿ ಬಳಿಕ ಬಿಗ್ ಬಾಸ್ ಮನೆ ಮತ್ತೆ ಸದ್ದು ಮಾಡುವುದರಲ್ಲಿ ಅನುಮಾನವಿಲ್ಲ, ಇನ್ನು ತ್ರಿವಿಕ್ರಮ್ ಗೆಳತಿ ಭವ್ಯ ಅವರಿಗೆ ಆನೆ ಬಲ ಬಂದಂತಾಗಿದೆ. ಇನ್ನು ಇವತ್ತು ರಾತ್ರಿ ಬಿಗ್ ಬಾಸ್ ಮನೆಯಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.