ಕುರಿಗಾಯಿ ಹನುಮಂತನಿಗೆ ಅನುಶ್ರೀ ಕಟ್ಟಿಕೊಟ್ಟ ಮನೆ ಎಷ್ಟು ಸೂಪರ್ ಆಗಿದೆ

ಸರಿಗಮಪ ವೇದಿಕೆ ಮೂಲಕ ಪರಿಚಯವಾದ ಹನುಮಂತ ಇವತ್ತು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ. ಹೌದು, ಒಬ್ಬ ಬಡ ಕುಟುಂಬದ ಕುರಿಗಾಯಿ ಹನುಮಂತ ಇವತ್ತು ಇಡೀ ರಾಜ್ಯ ನೋಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾನೆ ಅಂದರೆ ಅದು ಸಾಮಾನ್ಯ ವಿಚಾರವಲ್ಲ.

ಇನ್ನು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತ ಸ್ಪಲ್ಪ ದಿನದಲ್ಲೇ ಇಡೀ ಕರ್ನಾಟಕಕ್ಕೆ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದಾನೆ. ಇನ್ನು ಇದರ ಜೊತೆಗೆ ಸರಿಗಮಪದಲ್ಲಿ ಹನುಮಂತ ತನ್ನ ಮನೆ ಹಾಗೂ ಕುಟುಂಬದ ಕಷ್ಟ ಜೀವನದ ಬಗ್ಗೆ ಮಾತನಾಡಿದ್ದ.

ಅವತ್ತು ಹನುಮನ ಮಾತು‌ ಕೇಳಿ‌ ಭಾವುಕರಾಗಿದ್ದ ಅನುಶ್ರೀ ಅವರು ಹನುಮಂತನಿಗೆ ಮನೆ ನಿರ್ಮಾಣ ಮಾಡಲು ತನ್ನ ಕೈಲಾದ ಸಹಾಯವನ್ನು ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಹನುಮಂತ ಅನುಶ್ರೀ ಅವರನ್ನು ಇವತ್ತಿಗೂ ಅಕ್ಕ ಅಕ್ಕ ಅಂತ ಬಹಳ ಪ್ರೀತಿ ಮಾಡುವುದು ನಾವೆಲ್ಲ ಕಂಡಿದ್ದೀವಿ.