ಬಿಗ್ ಬಾಸ್ ಮನೆಯಲ್ಲಿ ಇವತ್ತಿನ ಟಸ್ಕ್ ನೋಡುವ ವೀಕ್ಷಕರು ಫಿದಾ ಅಗೋದು ಗ್ಯಾರಂಟಿ. ಹೌದು, ಮಂಜಣ್ಣ ಹಾಗೂ ಗೌತಮಿ ಜೊತಗೂಡಿ ಫಿನಾಲೆ ಟಾಸ್ಕ್ ಅನ್ನು ಆಡುತ್ತಾರೆ. ಆದರೆ ಗೌತಮಿ ಅವರ ನಿರ್ಲಕ್ಷ್ಯದಿಂದ ಮಂಜಣ್ಣ ಅವರ ಫಿನಾಲೆ ಕೈತಪ್ಪಿದ ಘಟನೆ ಇವತ್ತು ಬಿಗ್ ಬಾಸ್ ಮನೆಯಲ್ಲಿ ನಡೆದಿದೆ.
ಸ್ನೇಹಿತರೆ, ಬಿಗ್ ಬಾಸ್ ಮನೆಯಲ್ಲಿ ಇವತ್ತಿನ ಟಾಸ್ಕ್ ನೋಡಿ ಬೆಚ್ಚಿಬೀಳುವುದಂತು ಕಂಡಿತ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಬಿಗ್ ಬಾಸ್ ನೀಡುವ ಟಾಸ್ಕ್ ಬಹಳಷ್ಟು ಕಷ್ಟಕರವಾಗಿದೆ. ‘ಸಣ್ಣ ಕೊಳದಂತಹ ಬಕೆಟ್ ಮೂಲಕ ಬಿಗ್ ಬಾಸ್ ಸ್ಪರ್ಧಿಗಳು ಮಲಗಬೇಕು. ನಂತರದಲ್ಲಿ ಆ ಬಕೆಟ್ ತುಂಬಿಕೊಳ್ಳುವಷ್ಟರ ಮಟ್ಟಿಗೆ ನೀರು ತುಂಬಿಸಬೇಕು. ಅದರ ಬೆನ್ನಲ್ಲೇ ಮತ್ತೊಬ್ಬರು ಆ ಬಕೆಟ್ ನೀರು ಹೊರಹಾಕಬೇಕು.
ಈ ಟಾಸ್ಕ್ ನಲ್ಲಿ ಮಂಜಣ್ಣ ಅವರು ಸೋತಿದ್ದಾರೆ. ಹಾಗೂ ಬಿಗ್ ಬಾಸ್ ಫಿನಾಲೆ ಮಂಜಣ್ಣ ಅವರ ಕೈತಪ್ಪಿದ್ದು ಅವರ ಅಭಿಮಾನಿಗಳಿಗೆ ಇದೀಗ ಬೇಸರ ತಂದಿದೆ. ಇನ್ನು ಈ ಟಾಸ್ಕ್ ನಲ್ಲಿ ಸೋತ ಮಂಜಣ್ಣ ಸಾಕಷ್ಟು ನೊಂದುಕೊಂಡಿದ್ದಾರೆ. ಫಿನಾಲೆ ಕನಸು ಇಲ್ಲಿಗೆ ಮುಗಿಯಿತು ಎಂದು ಬೇಸರ ಹೊರಹಾಕಿದ್ದಾರೆ.