ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ ಇದೀಗ ಮೂರನೇ ಬಾರಿ ಭವ್ಯಾ ಗೌಡ ಕ್ಯಾಪ್ಟನ್ ಆಗಿದ್ದಾರೆ. ಆದರೆ, ಭವ್ಯಾ ಗೌಡ ನ್ಯಾಯಯುತವಾಗಿ ಕ್ಯಾಪ್ಟನ್ ಆಗಿಲ್ಲ ಎಂಬ ಅಸಮಾಧಾನ ‘ಬಿಗ್ ಬಾಸ್’ ಮನೆಯಲ್ಲಿ ಮೂಡಿದೆ. ಮಾತ್ರವಲ್ಲ.. ವೀಕ್ಷಕರು ಸಹ ಭವ್ಯಾ ಗೌಡ ಮೋಸದಾಟ ಆಡಿದ್ದಾರೆ ಅಂತ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಟಾಸ್ಕ್ ವೇಳೆ, ಭವ್ಯಾ ಗೌಡ ಚೀಟಿಂಗ್ ಮಾಡಿದ್ದಾರೆ ಅಂತ ವೀಕ್ಷಕರು ವಿಡಿಯೋ ಸಾಕ್ಷಿ ಮುಂದಿಟ್ಟುಕೊಂಡು ವಾದಿಸುತ್ತಿದ್ದಾರೆ. ಬೇರೆ ಚೆಂಡನ್ನ ಭವ್ಯಾ ಗೌಡ ತಗೊಂಡಾಗ ಅದಿಲ್ಲ ಭವ್ಯಾ ಅಂತ ರಜಿತ್ ಸ್ಪಷ್ಟವಾಗಿಯೇ ಹೇಳಿದ್ದರು. ಈ ವೇಳೆ ಭವ್ಯಾ ಗೌಡ ‘ಸುಮ್ನಿರು’ ಅಂತ ಹೇಳಿದ್ದಾರೆ. ಇದನ್ನೆಲ್ಲ ನೋಡಿದ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಹಾಕುತ್ತಿದ್ದಾರೆ.
ಸ್ನೇಹಿತರೇ…ಮೊದಲ ಬಾರಿಗೆ ಭವ್ಯಾ ಗೌಡ ಕ್ಯಾಪ್ಟನ್ ಆದಾಗ ತ್ರಿವಿಕ್ರಮ್ ಸಹಾಯ ಪಡೆದುಕೊಂಡಿದ್ದರು. ಎರಡನೇ ಬಾರಿ ಸುಳ್ಳು ಹೇಳಿ, ಮೋಸದಾಟಕ್ಕೆ ಕಾರಣವಾಗಿ, ಟಾಸ್ಕ್ ರದ್ದುಗೊಳಿಸಿ ಕ್ಯಾಪ್ಟನ್ ರೇಸ್‌ಗಿಳಿದು ಕ್ಯಾಪ್ಟನ್ ಆದರು. ಈಗ ಮತ್ತೆ ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ ಮುಂದಿನ ವಾರ ಕೂಡ ನಾಮಿನೇಷನ್‌ನಿಂದ ಸೇಫ್ ಆಗಿ ಫಿನಾಲೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಸ್ನೇಹಿತರೇ…ಫಿನಾಲೆ ಸಮೀಪದಲ್ಲಿರುವ ಮನೆಯ ಸ್ಪರ್ಧಿಗಳು ಮನೆಯ ನಾಯಕತ್ವ ವಹಿಸಿ ಇನ್ನಷ್ಟು ದಿನ ಉಳಿದುಕೊಳ್ಳಲು ಹೆಣಗಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ಮುಂದಿನ ಕ್ಯಾಪ್ಟನ್ ಆಗಲು ಭವ್ಯಾ ಗೌಡ ಮತ್ತು ಧನ್‌ರಾಜ್ ಆಚಾರ್ ನಡುವೆ ಪೈಪೋಟಿ ನಡೆದಿದೆ. ಬಾಲ್ ಹಾಕುವ ಟಾಸ್ಕ್ ನಲ್ಲಿ ಭವ್ಯಾ ಗೌಡ ಗೆದ್ದು ಮನೆಯ ಕ್ಯಾಪ್ಟನ್ ಆಗಿದ್ದಾರೆ.
ಸ್ನೇಹಿತರೇ…ಇನ್ನು ಭವ್ಯಾ ಅವರು ಮೂರನೇ ಬಾರಿ ಮನೆಯ ಕ್ಯಾಪ್ಟನ್ ಆಗಿದ್ದಕ್ಕೆ ಮನೆಯಲ್ಲಿ ಸ್ವಲ್ಪ ಅಸಮಾಧಾನ ಇದೆ. ಅದರಲ್ಲೂ ತ್ರಿವಿಕ್ರಮ್ ಅವರು ಈ ವಿಚಾರವನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಿರುವುದು ಎದ್ದು ಕಾಣಿಸುತ್ತಿತ್ತು. ಟಾಸ್ಕ್ ಒಂದರಲ್ಲಿ ಜೋಡಿಯಾಗಿಬರಲು ಭವ್ಯಾ ಹೇಳಿದಾಗ ಬರದೇ ಇದ್ದುದು ಒಂದು ಉದಾಹರಣೆ.ಕೊನೆಗೆ ಮಂಜು ಅವರನ್ನು ಭವ್ಯಾ ಆಯ್ಕೆ ಮಾಡಿಕೊಂಡರು.ಬಿಗ್ ಬಾಸ್ ಶೋ ಈಗ 90 ದಿನ ಕಳೆದಿವೆ. ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಈ ವಾರ ಭವ್ಯಾ ಗೌಡ ಮತ್ತು ರಜತ್ ಹೊರತುಪಡಿಸಿ ಉಳಿದ ಎಲ್ಲರೂ ಮನೆಯಲ್ಲಿ ನಾಮಿನೇಟ್ ಆಗಿದ್ದಾರೆ. ಈ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.