UI ಸಿನಿಮಾ ನೋಡಿ ತಲೆಕೆಡಿಸಿಕೊಂಡ ಯಶ್, ಮಾಧ್ಯಮಗಳ ಮುಂದೆ ಕಕ್ಕಾಬಿಕ್ಕಿಯಾದ ದಂಪತಿಗಳು

ಮೊನ್ನೆಯಷ್ಟೆ ಬಿಡುಗಡೆಯಾದ UI ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದಲ್ಲಿ ಇದೀಗ UI ಸಿನಿಮಾದ್ದೆ ಸದ್ದು. ಒಬ್ಬ Special Director ಇದ್ರೆ ಮಾತ್ರ ಇಂತಹ ಸಿನಿಮಾ ಮಾರುಕಟ್ಟೆಗೆ ಬರಲು ಸಾಧ್ಯ ಎನ್ನುತ್ತಾರೆ ಸಿನಿ‌ ತಾರೆಯರು.

ಹೌದು, ರಿಯಲ್ ಸ್ಟಾರ್ ಉಪೇಂದ್ರ ಅವರ UI ಸಿನಿಮಾ ನೋಡಿ ಇದುವರೆಗೂ ಯಾರು ಕೂಡ ಚೆನ್ನಾಗಿ ಅಂತನೂ ಅಂದಿಲ್ಲ, ಚೆನ್ನಾಗಿದೆ ಅಂತನೂ‌ ಅಂದಿಲ್ಲ.

ಹೌದು, ಉಪೇಂದ್ರ ‌ಅವರ ಸಿನಿಮಾನೇ ಹಾಗೆ ಅದನ್ನು ನೋಡಿ ಅರ್ಥ ಮಾಡಿಕೊಳ್ಳಲು ಇನ್ನೂ ಇಪ್ಪತ್ತು ವರ್ಷ ಬೇಕೇನೋ ಎನ್ನುತ್ತಾರೆ ಪ್ರೇಕ್ಷಕರು. ಇನ್ನು ಈ ಸಿನಿಮಾ‌ ಇದುವರೆಗೆ ಸರಿಯಾಗಿ ಯಾರಿಗೂ ತಿಳಿದಿಲ್ಲ. ಇದರ ಬಗ್ಗೆ review ಮಾಡೋಕೆ ಹೋದ ಯೂಟ್ಯೂಬ್ ಚಾನಲ್ ಗಳು ಕೂಡ ತಲೆಕೆಡಿಸಿಕೊಂಡಿದೆ.

ಇನ್ನು ಈ‌ ಸಿನಿಮಾವನ್ನು ನಟ ಯಶ್ ದಂಪತಿಗಳು ನೊಡೋಕೆ ಬಂದಿದ್ದರು. ಸಿನಿಮಾ ಪೂರ್ತಿ ನೋಡಿ ಹೊರಬಂದ ಯಶ್ ಅವರಿಗೆ ತಲೆಕೆಟ್ಟು ಹೋದಂತೆ ಕಾಣುತ್ತಿದೆ. ಹೌದು, UI ಸಿನಿಮಾ ಸಾಮಾನ್ಯ ‌ಸಿನಿಮಾವಲ್ಲ. ಇಲ್ಲಿ ‌ಸಾಕಷ್ಟು ಅರ್ಥವಾಗದ ವಿಚಾರಗಳಿವೆ ಅದರ ಬಗ್ಗೆ ನಾವುಗಳು ತಲೆಕೆಡಿಸಿಕೊಳ್ಳದೆ ಇವತ್ತು UI ಸಿನಿಮಾ‌ ಅರ್ಥ ಆಗುತ್ತಿಲ್ಲ ಎನ್ನುತ್ತಾರೆ ಉಪೇಂದ್ರ ಅವರು