ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಏಕಾಏಕಿ ಹೊರಬಂದ ಬಳಿಕ ತನ್ನ ಜೀವನದ ಕಹಿ ಘಟನೆಯನ್ನು ಕನ್ನಡಿಗರ ಮುಂದೆ ಬಿಚ್ಚಿಟ್ಟಿದ್ದಾರೆ. ಹೌದು, ಗೋಲ್ಡ್ ಸುರೇಶ್ ಇದೀಗ ಸೋಶಿಯಲ್ ಮೀಡಿಯಾ ಲೈವ್ ಬರುವ ಮೂಲಕ ಸಾಕಷ್ಟು ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ಇತ್ತಿಚೆಗೆ ತನ್ನ ಪತ್ನಿ ಬಳಿ ವ್ಯವಹಾರ ನೋಡಿಕೊಳ್ಳುವಂತೆ ಹೇಳಿದ್ದೆ. ಆದರೆ ಆಕೆಗೆ ನಿಭಾಯಿಸಲು ಸಾಧ್ಯವಾಗದೆ ತನ್ನ ಬಹುಕೋಟಿ ವ್ಯಾಪಾರ ನಷ್ಟದ ಹಾದಿ ಹಿಡಿದಿದೆ ಎಂದಿದ್ದಾರೆ. ಇಷ್ಟು ಮಾತ್ರವಲ್ಲದೇ ನಾನು ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಬಿಗ್ ಬಾಸ್ ವೇದಿಕೆ ಹತ್ತಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಇದರ ಜೊತೆಗೆ ಬಿಗ್ ಬಾಸ್ ವೀಕ್ಷಕರು ನನಗೆ ಸಾಕಷ್ಟು ಪ್ರೋತ್ಸಾಹ ಕೊಟ್ಟಿದ್ದಾರೆ. ನನ್ನ ಆಟ ಒಡನಾಟ ನೋಡಿ ರಾಜ್ಯಾದ್ಯಂತ ವೀಕ್ಷಕರ ಮತದ ಮೊತ್ತವಾಗಿ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದೆ ಎಂದಿದ್ದಾರೆ. ಇನ್ನುಮುಂದೆ ತನ್ನ ಬ್ಯುಸಿನೆಸ್ ನೋಡಿಕೊಳ್ಳಬೇಕು. ಕಳೆದುಕೊಂಡ ಹಣ ಮರು ಪಡೆಯಬೇಕು ಎಂದಿದ್ದಾರೆ ಗೋಲ್ಡ್ ಸುರೇಶ್