ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಮಿಂಚಿದ ರಚಿತಾ ರಾಮ್ ಅವರು ಸಾಕಷ್ಟು ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ. ಇಷ್ಟು ಮಾತ್ರವಲ್ಲದೇ ತಮಿಳು ಚಿತ್ರರಂಗದಲ್ಲೂ ರಚಿತಾ ರಾಮ್ ಅವರಿಗೆ ಬಹು ಬೇಡಿಕೆ ಇದೆ. ಇನ್ನು ಇವರ ಸಹೋದರಿ ನಿತಾ ರಾಮ್ ಅವರು ಮಲಯಾಳಂ ಚಿತ್ರರಂಗದಲ್ಲಿ ಇಂದಿಗೂ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇನ್ನು ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲು ಮೂಲ ಕಾರಣ ಬುಲ್‌ಬುಲ್ ಸಿನಿಮಾ, ಈ ಸಿನಿಮಾ ಮೂಲಕ ಜನಪ್ರಿಯತೆ ಪಡೆದಿದ್ದ ರಚಿತಾ ರಾಮ್ ಅವರು ನಟ ದರ್ಶನ್ ಅವರನ್ನು ಯಾವತ್ತೂ ಮರೆತಿಲ್ಲ. ಇತ್ತಿಚೆಗೆ ಜೈಲು ಸೇರಿದ್ದ ದರ್ಶನ್ ಅವರನ್ನು ಜೈಲಿಗೆ ಹೋಗಿ ನೋಡಿ ಬಿದ್ದಿದ್ದಾರೆ ರಚಿತಾ ರಾಮ್
ನಟ ದರ್ಶನ್ ಅವರನ್ನು ನನ್ನ ಜೀವನದಲ್ಲಿ ಮರೆಯಲ್ಲ ಎಂದಿದ್ದಾರೆ ರಚಿತಾ ರಾಮ್, ನಾನು ಇರುವಷ್ಟು ದಿನ ದರ್ಶನ್ ಅವರ ಪರ ನಿಲ್ಲುತ್ತೇನೆ, ನನ್ನ ಈ ಸಕ್ಸಸ್ ಫುಲ್ ಜೀವನಕ್ಕೆ ನಟ ದರ್ಶನ್ ಕಾರಣ ಎಂದಿದ್ದಾರೆ ಬುಲ್‌ಬುಲ್ ಸುಂದರಿ.