ಕರ್ನಾಟಕದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಇದೀಗ ಕಾನೂನು ಸಂಕಷ್ಟಕ್ಕೆ ಗುರಿಯಾಗಿದೆ ಎಂಬ ಮಾಹಿತಿ ಹೊರಬರುತ್ತಿದೆ. ಹೌದು, ಮೂರು ವಾರಗಳ ಕಾಲ ಬಿಗ್ ಬಾಸ್ ಮನೆಗೆ ಬೀಗ ಎಂಬ ಗಾಸಿಪ್ ಎದ್ದಿದೆ. ಈ ಬಗ್ಗೆ ಬಿಗ್ ಬಾಸ್ ಸಂಸ್ಥೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಕಡೆ ಮುಖ ಮಾಡಿರುವ ಸ್ಪರ್ಧಿಗಳಿಗೂ ಆತಂಕ ಶುರುವಾಗಿದೆ. ಇನ್ನು ಬಿಗ್ ಬಾಸ್ ವೀಕ್ಷಕರಲ್ಲಿ ಈ ವಿಚಾರವಾಗಿ ಸಾಕಷ್ಟು ಕುತೂಹಲ ಎದ್ದಿದೆ. ಇದರ ನಡುವೆ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರೆಂಬ ವಾದವಿವಾದಗಳು ಕೂಡ ಹೆಚ್ಚಾಗಿದೆ.
ಇನ್ನು ಬಿಗ್ ಬಾಸ್ ಕಾನೂನು ಸಂಕಷ್ಟದ ಬಗ್ಗೆ ಎಲ್ಲೂ ಅಷ್ಟೊಂದು ಸ್ಪಷ್ಟತೆ ಇಲ್ಲ. ಆದರೆ ಜಾಲತಾಣದಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನು ಇದರ ಬಗ್ಗೆ ಸ್ಪಷ್ಟತೆ ಸಿಗಲು ಇವತ್ತಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೋಡಬೇಕಷ್ಟೆ.