ವರ್ತೂರ್ ಸಂತು ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ತನ್ನ ವೈಯಕ್ತಿಕ ಜೀವನ ಕಹಿಘಟನೆ ಹಂಚಿಕೊಂಡಿದ್ದರು. ಈ ವೇಳೆ ವರ್ತೂರ್ ಸಂತು ಅವರ ಮನಸ್ಸಿನ ನೋವು ಅರ್ಥ ಮಾಡಿಕೊಂಡು ತನಿಷಾ ಅವರು ವರ್ತೂರ್ ಅವರ ಸ್ನೇಹ ಬೆಳಸಿಕೊಂಡರು. ನಂತರದಲ್ಲಿ ಈ ಇಬ್ಬರ ನಡುವಿನ ಬಾಂಧವ್ಯ ಬಿಗ್ ಬಾಸ್ ಮನೆಯಲ್ಲಿ ಗಟ್ಟಿಯಾಯಿತು.
ಇನ್ನು ವರ್ತೂರು ಸಂತು ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಈ ಇಬ್ಬರ ಮದುವೆ ಗಾಸಿಪ್ ಬಾರಿ ಸದ್ದು ಮಾಡಿತ್ತು. ಆದರೆ ಸಂದರ್ಭದಲ್ಲಿ ವರ್ತೂರ್ ಅವರು ತಮ್ಮ ಹಸು ಸಾಕಣೆಯ ಕಡೆ ಹೆಚ್ಚಿನ ಗಮನ ಕೊಟ್ಟರು. ತದನಂತರದಲ್ಲಿ ತನಿಷಾ ಅವರು ಬಂಗಾರದ ಅಂಗಡಿ ಓಪನ್ ಮಾಡಿ ವ್ಯಾಪಾರ ಶುರು ಮಾಡಿಕೊಂಡರು.
ಇನ್ನು ಈ ಇಬ್ಬರಿಗೂ ಮತ್ತೆ ಮದುವೆ ಸದ್ದು ಕೇಳಿಬರುತ್ತಿದೆ. ವರ್ತೂರ್ ಮೇಲೆ ತನಿಷಾ ಅವರಿಗೆ ಪ್ರೀತಿ ಇದೆ. ಆದರೆ ವರ್ತೂರ್ ಮಾತ್ರ ತನ್ನ ಹಳೆ ಮದುವೆ ಜೀವನದ ಕಹಿ ನೆನಪಿನಿಂದ ಮತ್ತೆ ಮದುವೆ ಆಗಿ ಅದೇ ತಪ್ಪು ಮಾಡಬಾರದು ಎಂದು ಮದುವೆ ಬಗ್ಗೆ ಸ್ಪಲ್ಪ ದೂರವಾಗಿದ್ದಾರೆ.