ಅಪ್ಪ ಬೇಕಾ ಅಮ್ಮ ಬೇ.ಕಾ ಕೇಳಿದಕ್ಕೆ ಧ್ರುವ ಸರ್ಜಾ ಮಗಳು‌ ಕೊಟ್ಟ ಉತ್ತರವೇನು ಗೊತ್ತಾ

ತಾಯಿ ತಂದೆಯರಿಗೆ ಮಕ್ಕಳು ನೀಡುವ ಖುಷಿಯನ್ನು ಜಗತ್ತಿನ ಬೇರ್ಯಾವುದೇ ವಸ್ತು ಅಥವಾ ಘಟನೆ ನೀಡಲಾರದು. ಮಕ್ಕಳು ಏನೇ ಮಾಡಿದರೂ ತಂದೆ ತಾಯಿಗೆ ಅದು ಖುಷಿ. ತಮ್ಮ ಮಗುವಿನೊಂದಿಗೆ ಮಗುವಾಗಿ ಅವರು ಪಡುವ ಸಂತೋಷ ಅವರಿಗಷ್ಟೇ ಗೊತ್ತು. ಎಷ್ಟೇ ಹೊತ್ತು ಮಗುವಿನೊಂದಿಗೆ ಕಳೆದರೂ ಕಡಿಮೆಯೇ.

ಮಗು ಮಲಗದೇ ಅಕಾಲ ವೇಳೆಯಲ್ಲಿ ಎದ್ದು ಅತ್ತರೂ ತಾಯಿಗೆ ಸಿಟ್ಟು ಬಾರದು. ಹೌದು ಇದೀಗ ಎಲ್ಲೆಡೆ ನಟ ಧ್ರುವ ಸರ್ಜಾ ಅವರ ಮಗಳ ತೊದಲು ನುಡಿಯಲ್ಲಿ ಮಾತನಾಡುತ್ತಿರುವ ವೀಡಿಯೊ ಒಂದು ವೈರಲ್ ಆಗಿದ್ದು ಎದೆಯ ಮೇಲೆ ಮಲಗಿಸಿಕೊಂಡು ಧ್ರುವ ಸರ್ಜಾ ನಿಂಗೇನು ಇಷ್ಟ ಕೇಳಿದರೆ ಅವಳು ತೊದಲು ನುಡಿಯಲ್ಲಿ ಬಾಯಿ ಎಂದಿದ್ದಾಳೆ.

ಈ ಹಿಂದೆ ಪ್ರೇರಣಾ ಅವರೊಂದಿಗೆ ಕೂಡ ತೊದಲು ನುಡಿಯಲ್ಲಿ ಮಾತಾಡಿ ಎಲ್ಲರ ಮನ ಕದ್ದಿದಾಳೆ. ಪುಟ್ಟ ಪುಟ್ಟ ಪಾದಗಳು, ಹೆಜ್ಜೆಯ ಮೇಲೆ ಹೆಜ್ಜೆಯ ಇಡುತ್ತಾ ವಾಲಾಡುತ್ತಾ, ಆಗಾಗ ಬಿದ್ದೇಳುತ್ತಾ ಓಡಾಡುವ ಪುಟ್ಟ ಮಗುವನ್ನು ನೋಡುವುದೇ ಚಂದ. ಸ್ಪಷ್ಟ ಮಾತು ಬಾರದಿದ್ದರೂ ತೊದಲು ನುಡಿಯನ್ನ ಆಡುತ್ತಾ ಇದ್ದರಂತೂ ಹೇಳಿಕೊಳ್ಳಲಾಗದ ಸಂತೋಷ. ಪುಟ್ಟ ತುಟಿಯಂಚಿನಲ್ಲಿ ಹೊರಡುವ ಪದಗಳಿಗೆ ಸಾಟಿ ಎಲ್ಲಿದೆ?
 ಅಸ್ಪಷ್ಟ ಮಾತಾಗಿದ್ದರೂ, ಪುಟ್ಟ ಕಂದಮ್ಮ ಬಾಯಿಯಲ್ಲಿ ತೊದಲು ನುಡಿಗೆ ನಟ ಧ್ರುವ ಸರ್ಜಾ ನಕ್ಕಿದ್ದಾರೆ.

ಇನ್ನು ತಾಯಿ ಪ್ರೇರಣಾ ಅವರಂತೂ ಸಂತೋಷದಿಂದ ಕಂದನನ್ನು ಎತ್ತಿ ಮುದ್ದಾಡಿದ್ದಾರೆ. ಈ ಮೊದಲು ಪ್ರೇರಣಾ ಹೇಳಿಕೊಟ್ಟಿದ್ದನ್ನು ಹೇಳಲು ಅಮ್ಮ ಹೇಳಿಕೊಡುತ್ತಿರುವ ಶಬ್ದಗಳನ್ನು ಮಗು ಹೇಳಲು ಕಷ್ಟಪಡುವ ತಮಾಷೆ ಸಂಗತಿ ಎಲ್ಲರಿಗೂ ನಗು ತರಿಸುವಂತಿತ್ತು ಹೇಳಲು ಕಷ್ಟವಾದ ಅಕ್ಷರಗಳನ್ನು ಮಗು ತನ್ನಲ್ಲಾದಷ್ಟು ಪ್ರಯತ್ನಿಸಿ ಹೇಳುತ್ತದೆ. ಮಗುವಿನ ಈ ವಿಡಿಯೋ ಎಲ್ಲರ ಮುಖದಲ್ಲಿ ನಗು ತರಿಸುವಂತಿದೆ. ಇದೀಗ ಈ ವೀಡಿಯೊ ಎಲ್ಲೆಡೆ ವೈರಲ್ ಆಗಿದ್ದು ಸೋ ಕ್ಯೂಟ್ ಎಂದಿದ್ದಾರೆ ಅಭಿಮಾನಿಗಳು.

You may also like...