• Uncategorised

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಬಳಿಕ ದಿನಕೊಂದು ಚಮತ್ಕಾರ, ಮೆಚ್ಚಿಕೊಂಡ ಮೋದಿಜಿ

ಅಯೋಧ್ಯೆ ರಾಮಮಂದಿರದಲ್ಲಿ ರಾಮನಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಆ ರಾಮನಮೂರ್ತಿಯನ್ನು ತಯಾರಿಸಿದ್ದು ಮೈಸೂರಿನ ಕಲಾವಿದ ಅರುಣ್‌ ಯೋಗಿರಾಜ್‌. ಮೂರ್ತಿ ತಯಾರಿಸಿ ಹಸ್ತಾಂತರಿಸಿದ ನಂತರ ರಾಮನ ಕಣ್ಣುಗಳನ್ನು ರೂಪಿಸಿದ್ದು ಚಿನ್ನದ ಉಳಿ ಹಾಗೂ ಬೆಳ್ಳಿ ಸುತ್ತಿಗೆಯಲ್ಲಿ. ಇದನ್ನು ಖುದ್ದು ಅರುಣ್‌ ಅವರೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ, ಮೂರ್ತಿ ಆಯ್ಕೆಯಾಗಿರುವ ವಿಷಯ ನನಗೆ ಡಿಸೆಂಬರ್ 29ರಂದು ತಿಳಿಯಿತು. ನಮ್ಮ ಕೆತ್ತನೆಯ ಮೂರ್ತಿ ಆಯ್ಕೆಯಾಗಿದೆ ಅಂತ ಸಂಭ್ರಮಾಚರಣೆ ಮಾಡೋದು ಅಲ್ಲ. ಆ ಮೂರ್ತಿ ಏನೂ ತೊಂದರೆ ಇಲ್ಲದೇ ಗರ್ಭಗುಡಿಯೊಳಗೆ ಪ್ರತಿಷ್ಠಾಪನೆ ಆಗಬೇಕಿತ್ತು. ಹೀಗೆ ಹಲವು ಕೆಲಸಗಳು ಇರೋ ಕಾರಣ ಯಾರನ್ನೂ ಭೇಟಿ ಆಗಬಾರದು ಎಂದು ತೀರ್ಮಾನ ಮಾಡಿದ್ದೆ. ಮೊದಲು ಎಲ್ಲಾ ಕರ್ತವ್ಯಗಳನ್ನು ಪೂರ್ಣ ಮಾಡುವಲ್ಲಿ ನಿರತನಾಗಿದ್ದೆ ಎಂದರು.

ಭಾರತೀಯರ ಹಲವು ವರ್ಷಗಳ ಕನಸು ನನಸಾಗಿದೆ. ರಾಮ ಮಂದಿರ ನಿರ್ಮಾವಾಗಿದೆ.ನಿನ್ನೆ-ಮೊನ್ನೆಯಿಂದ ದೇಶದ ಜನರು ನೀಡುತ್ತಿರುವ ಪ್ರೀತಿಗೆ ಅಭಾರಿಯಾಗಿದ್ದೇನೆ. ಈ ದೇವರ ಕಾರ್ಯದಲ್ಲಿ ಭಾಗಿಯಾಗಿರೋದು ನಮ್ಮ ಪುಣ್ಯ. ಜೀವನದಲ್ಲಿ ಇನ್ನೇನು ಬೇಡ ಅನ್ನುವಷ್ಟು ದೇಶದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಪ್ರಪಂಚದಲ್ಲಿ ನನ್ನ ಅಂತಹ ಅದೃಷ್ಟ ಯಾರೂ ಇಲ್ಲ. ಅಷ್ಟು ದೊಡ್ಡ ದೇವಸ್ಥಾನ, ರಾಮಜನ್ಮಭೂಮಿಯಲ್ಲಿ ನಾವು ಕೆಲಸ ಮಾಡಿರೋದು ದೈವ ಇಚ್ಛೆ ಎಂದು ಹೇಳಿದರು.

ದೇಶದ 140 ಕೋಟಿ ಜನರು ಬಾಲರಾಮನನ್ನು ನೋಡುಬೇಕೆಂದು ಕಾಯುತ್ತಿದ್ದರು. ದೇಶದ ಜನತೆಗೆ ಬಾಲರಾಮನನ್ನು ತೋರಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿತ್ತು. ಇದಕ್ಕಾಗಿ ತುಂಬಾನೇ ಹೋಂ ವರ್ಕ್ ಮಾಡಲಾಗಿದೆ. ಇಲ್ಲಿಗೆ ಬಂದ್ಮೇಲೆ ಗೋವಿಂದಗಿರಿ ಮಹಾರಾಜರು ರಾಮನ ಲಕ್ಷಣಗಳ ಬಗ್ಗೆ ಹೇಳಿದ್ದರು. ಇದರ ಜೊತೆಗೆ ಅಧ್ಯಯನ ಸಹ ಮಾಡಬೇಕಿತ್ತು. ರಾಮನ ದಯದಿಂದ ಮೂರ್ತಿ ಕೆತ್ತನೆಯಾಗಿದೆ ಆದರಲ್ಲಿ ವಿಷ್ಣುವಿನ ಹತ್ತು ಅವತಾರಗಳ ನಾವು ಕಾಣಬಹುದು ಎಂದಿದ್ದಾರೆ.

You may also like...