ಅರವಿಂದ್ ಜೊತೆ ಆದಷ್ಟು ಬೇಗ ಮದುವೆ ಊಟ ಬಡಿಸ್ತಿನಿ ಎಂದ ದಿವ್ಯಾ ಉರುಡುಗ
ಬಿಗ್ ಬಾಸ್‌ನಿಂದ ಮನೆ ಮಾತಾದ ನಟಿ ದಿವ್ಯಾ ಉರುಡುಗ ಕಿರುತೆರೆ, ಹಿರಿತೆರೆ ಎರಡರಲ್ಲೂ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಚಿಟ್ಟೆ ಹೆಜ್ಜೆ, ಅಂಬಾರಿ, ಓಂ ಶಕ್ತಿ ಓಂ ಶಾಂತಿ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ಬಳಿಕ ಹಿರಿತೆರೆಗೆ ಕಾಲಿಟ್ಟಿದ್ದರು. ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಮೂಲಕ ಸಿನಿಮಾಗಳಿಗೆ ಪಾದಾರ್ಪಣೆ ಮಾಡಿದ್ದರು.
ಬಿಗ್ ಬಾಸ್ ಕನ್ನಡದಲ್ಲಿಯೂ ದಿವ್ಯಾ ಉರುಡುಗ ಗಮನಸೆಳೆದಿದ್ದರು. ಇತ್ತೀಚೆಗೆ ದಿವ್ಯಾ ಉರುಡುಗ ನಟಿಸಿದ್ದ ಅರ್ಧಂಬರ್ಧ ಪ್ರೇಮಕತೆ ಸಿನಿಮಾ ಬಿಡುಗಡೆಗೊಂಡಿತ್ತು. ಈಗ ಮತ್ತೆ ಹೊಸ ಧಾರಾವಾಹಿ ನಿನಗಾಗಿ ಮೂಲಕ ಕಿರುತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ. ಇನ್ನು ಮದುವೆ ಲೇಟ್ ಇದೆ ಎಂದಿದ್ದಾರೆ.
ಪ್ರತಿ ವಿಷಯದಲ್ಲಿಯೂ ಯೂನಿಕ್ ಆಗಿ ಮಾಡುತ್ತಿದ್ದೇವೆ. ರಚ್ಚು ಎಂಬ ಮುದ್ದಾದ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ರಚ್ಚು ಎಂಬ ಸೂಪರ್ ಸ್ಟಾರ್ ಸಿಂಪಲ್ ಆಗಿ ಲೈಫ್ ಲೀಡ್ ಮಾಡುವ ಕನಸು ಕಾಣುತ್ತಾ ಇರುತ್ತಾಳೆ. ಅಮ್ಮನ ಮಾತೇ ವೇದ ವಾಕ್ಯ. ಆ ರೀತಿ ಪಾತ್ರ ನನ್ನದು. ಅವಳ ವೈಯಕ್ತಿಕ ಜೀವನ, ಅವಳ ಆಸೆ ನೆರವೇರುತ್ತಾ? ಅನ್ನೋದನ್ನು ನೀವು ನೋಡ್ಬೇಕು. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವ ಖುಷಿ ಇದೆ. ಸಿನಿಮಾ ರೀತಿಯೇ ಸೀರಿಯಲ್ ಶೂಟ್ ಮಾಡಲಾಗುತ್ತಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ದಿವ್ಯಾ ಉರುಡುಗ ಅವರು ಈ ಹಿಂದೆ ಓಂ ಶಕ್ತಿ, ಓಂ ಶಾಂತಿ, ಅಂಬಾರಿ ಧಾರಾವಾಹಿಯಲ್ಲಿ ನಟಿಸಿದ್ದರು. ಆ ನಂತರ ಬಿಗ್ ಬಾಸ್ ಕನ್ನಡ ಸೀಸನ್ 8 ಶೋನಲ್ಲಿ ಭಾಗವಹಿಸಿದ್ದರು. ಇದರ ಮಧ್ಯೆ ಸಿನಿಮಾಗಳನ್ನು ಮಾಡುತ್ತಿದ್ದ ಅವರು ಈಗ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಅಭಿಮಾನಿಗಳು ಸೂಪರ್ ಎಕ್ಸಿಯಟ್ ಆಗಿದ್ದಾರೆ.