• Uncategorised

ಇನ್ನುಮುಂದೆ ಪತ್ನಿಯ ಅನುಮತಿ ಪಡೆಯದೆ ಆ ಕೆಲಸ ಮಾಡುವಂತಿಲ್ಲ, ಹೈಕೋರ್ಟ್ ಮಹತ್ವದ ಆದೇಶ

ಅ.ತ್ಯಾಚಾರ ಅದು ಯಾರು ಮಾಡಿದ್ರೂ ಅದನ್ನು ಅ.ತ್ಯಾಚಾರ ಎಂದು ಪರಿಗಣಿಸಲಾಗುವುದು. ಗಂಡ ತನ್ನ ಹೆಂಡತಿಯನ್ನು ಬಲವಂತವಾಗಿ ಲೈಂ.ಗಿಕ ಕ್ರಿಯೆಗೆ ಎಳೆದರೆ ಅದನ್ನು ಕೂಡ ಅ‌.ತ್ಯಾಚಾರ ಎಂದು ಹೇಳಲಾಗುವುದು ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ಇತ್ತಿಚಿಗೆ ದೇಶದಲ್ಲಿ ಮಹಿಳೆ ಮೇಲಿನ ಲೈಂ.ಗಿಕ ದೌ.ರ್ಜನ್ಯ ಹೆಚ್ಚಾಗಿದೆ.

ಇದನ್ನು ಬದಲಾವಣೆ ಮಾಡಬೇಕಿದೆ ಎಂದು ಗುಜರಾತ್​​​​ ಹೈಕೋರ್ಟ್​​​ನ ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಹೇಳಿದ್ದಾರೆ. ಈ ಕಾರಣಕ್ಕೆ ವೈವಾಹಿಕ ಅತ್ಯಾಚಾರವನ್ನು ಕೂಡ ಅಪರಾಧ ಎಂದು ಪರಿಗಣಿಸಬೇಕಿದೆ ಎಂದು ಹೇಳಿದೆ. ಹೊರದೇಶಗಳಾದ ಅಮೇರಿಕ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಕೆನಡಾ, ಇಸ್ರೇಲ್​ನಲ್ಲೂ ವೈವಾಹಿಕ ಅತ್ಯಾಚಾರವನ್ನು ಕಾನೂನುಬಾಹಿರ ಎಂದು ಹೇಳಿದೆ.

ಪತ್ನಿಯ ಮೇಲೆ ಪತಿ ಬಲವಂತದ ಲೈಂ.ಗಿಕ ಕ್ರಿಯೆಗೆ ಒತ್ತಾಯಿಸಿದರೆ ಅದು ಅಪರಾಧ ಎಂದು ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ನಾನು ಇದನ್ನು ಅಪರಾಧ ಎಂದು ಒಪ್ಪಿಕೊಳ್ಳುವೆ ಎಂದು ಹೇಳಿದ್ದಾರೆ. ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಅವರು ಹೇಳಿರುವಂತೆ ಭಾರತದಲ್ಲಿ ಮಹಿಳೆ ಮೇಲೆ ದೌ.ರ್ಜನ್ಯ ಹೆಚ್ಚಾಗಿದೆ.

ಇದು ಸಾಮಾಜಿಕ ನೆಲೆಯಲ್ಲಿ ಮಹಿಳೆಯನ್ನು ಬದಕಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಮಹಿಳೆ ಮೇಲೆ ಮಾನಸಿಕವಾಗಿ ಅಥವಾ ದೈ.ಹಿಕವಾಗಿ ಹಿಂಸೆ ನೀಡಿದರೆ ಅದು ದೊಡ್ಡ ಅಪರಾಧವಲ್ಲ ಎಂದು ಹೇಳುತ್ತೇವೆ. ಆದರೆ ಇದು ವಿಷಾದನೀಯ ಎಂದು ಹೇಳಿದ್ದಾರೆ.

ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಬಲವಂತದ ಲೈಂ.ಗಿಕ ಕ್ರಿಯೆ ನಡೆಸಿದ್ದಾನೆ. ಇದರ ಜತೆಗೆ ಮಹಿಳೆಯ ಅತ್ತೆ ಕೂಡ ಇದಕ್ಕೆ ಸಾಥ್ ನೀಡಿದ್ದಾಳೆ ಎಂದು ದೂರು ದಾಖಲಿಸಲಾಗಿತ್ತು. ಇದನ್ನು ಗುಜರಾತ್ ಹೈಕೋರ್ಟ್ ವಿಚಾರಣೆ ನಡೆಸುವ ವೇಳೆ ಈ ಅಂಶವನ್ನು ಹೇಳಿದೆ.

ಮಹಿಳೆ ದೂರಿನಲ್ಲಿ ತನ್ನ ಪತಿ ನನಗೆ ಲೈಂ.ಗಿಕ ಕಿ.ರುಕುಳ ಹಾಗೂ ಬಲವಂತವಾಗಿ ಲೈಂ.ಗಿಕ ಕ್ರಿಯೆ ನಡೆಸಿ, ನನ್ನ ನಗ್ನ ಫೋಟೋಗಳನ್ನು ಅ.ಶ್ಲೀಲ ಸೈಟ್ಗಳಿಗೆ ಅಪ್ಲೋಡ್ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾಳೆ. ಇದನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಇದು ಅತ್ಯಾಚಾರ ಎಂದು ಪರಿಗಣಿಸಿ ಗಂಡ ಮತ್ತು ಅತ್ತೆಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಮಾತ್ರವಲ್ಲ ಅವರಿಗೆ ದಂಡ ವಿಧಿಸಿದೆ.

You may also like...