• Uncategorised

ಎರಡು ಗಂಟೆ ವಿಮಾನಯಾನದಲ್ಲಿ ‘ಒಂದು ಗಂಟೆಯಲ್ಲಿ ಎಲ್ಲವೂ ಮುಗಿಸಿದ ಪ್ರೇಮಿಗಳು; ಸಹಪ್ರಯಾಣಿಕರಿಂದ ದೂರು

ಪಾರ್ಕ್, ಪಬ್, ಹೊಟೇಲ್, ಮೆಟ್ರೋ ಹೀಗೆ ಎಲ್ಲೆಂದರಲ್ಲಿ ರೊಮ್ಯಾನ್ಸ್ ಮಾಡುವ ಜೋಡಿಗಳು ಅಗಾಗ ಕಾಣ ಸಿಗುತ್ತಾರೆ. ಆದ್ರೆ ಇದೀಗ ವಿಮಾನದಲ್ಲೂ ರೊಮ್ಯಾನ್ಸ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ವಿಮಾನ ಪ್ರಯಾಣ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಕೆಲ ಶಿಸ್ತು ಪಾಲಿಸುಬೇಕಾಗಿರುವ ಅಗತ್ಯವಿದೆ.

ಆದರೆ ಇತ್ತೀಚೆಗೆ ವಿಮಾನ ಪ್ರಯಾಣದಲ್ಲಿ ಹಲವು ಅಶಿಸ್ತಿನ ನಡವಳಿಕೆ, ಕಿರುಕುಳ ಘಟನೆಗಳು ವರದಿಯಾಗುತ್ತಿದೆ. ಇದೀಗ ವಿಮಾನ ಪ್ರಯಾಣದಲ್ಲಿ ಜೋಡಿಗಳ ರೋಮ್ಯಾನ್ಸ್ ಭಾರಿ ವೈರಲ್ ಆಗಿದೆ. ಈ ಜೋಡಿಗೆ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಬೆಡ್ ರೂಂ ಲೈಟ್ ಆಫ್ ಮಾಡಿದಷ್ಟು ಖಷಿಯಾಗಿದೆ. ರೋಮ್ಯಾಂಟಿಕ್ ಮೂಡ್‌ನಲ್ಲಿ ಪ್ರಣಯ ಹಕ್ಕಿಗಳಂತೆ ಸದೀರ್ಘ ನಾಲ್ಕು ತಾಸು ಪ್ರಯಾಣ ಮಾಡಿದ್ದಾರೆ.

ಈ ಜೋಡಿಯ ರೋಮ್ಯಾಂಟಿಕ್ ಜರ್ನಿ ಇದೀಗ ಭಾರಿ ವೈರಲ್ ಆಗಿದೆ. ಆದರೆ ಈ ಜೋಡಿ ಹಕ್ಕಿಗಳ ಉಪ್ರಯಾಣ ಇತರರಿಗೆ ತೀವ್ರ ಇರಿಸು ಮುರಿಸು ತಂದಿದೆ. ಪ್ರಣಯ ಹಕ್ಕಿಗಳ ವೈರಲ್ ಫೋಟೋ, ವಿಮಾನ ಪ್ರಯಾಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ವಿಮಾನ ಪ್ರಯಾಣದಲ್ಲಿನ ಈ ಘಟನೆಯನ್ನು FLEA ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ದೃಶ್ಯ ಸಂಪೂರ್ಣ ನಾಲ್ಕು ಗಂಟೆ ಪ್ರಯಾಣದಲ್ಲಿ ನಡೆದಿತ್ತು ಎಂದು ಬರೆದುಕೊಂಡಿದ್ದಾರೆ. ವಿಮಾನ ಹತ್ತಿದ ಈ ಜೋಡಿ ತಮ್ಮ ಸೀಟಿನಲ್ಲಿ ಆಸಿನವಾಗಿದೆ. ವಿಮಾನ ಟೇಕ್ ಆಫ್ ಮೊದಲು ಸೀಟು ಬೆಲ್ಟು ಕಡ್ಡಾಯವಾಗಿದೆ. ಹೀಗಾಗಿ ಅಕ್ಕ ಪಕ್ಕ ಕುಳಿತಿದ್ದ ಈ ಜೋಡಿ ಸೀಟು ಬೆಲ್ಟು ಹಾಕಿ ಶಿಸ್ತಿನಿಂದ ಕುಳಿತಿದೆ.

ಆದರೆ ಟೇಕ್ ಆಫ್ ಆದ ಬೆನ್ನಲ್ಲೇ ಸೀಟು ಬೆಲ್ಟ್ ತೆಗೆದು ಬೆಡ್ ರೂಂ ಮಾಡಿಕೊಂಡಿದ್ದಾರೆ. ಕುಳಿತುಕೊಳ್ಳುವ ಸೀಟಿನಲ್ಲಿ ಇಬ್ಬರು ಮಲಗಿದ್ದಾರೆ. ಒಂದೆಡೆ ವಿಮಾನ ಆಗಸದಲ್ಲಿ ಹಾರಾಡುತ್ತಿದ್ದರೆ, ಈ ಜೋಡಿ ಹಕ್ಕಿಗಳು ತಮ್ಮದೇ ಪ್ರಯಣ ಪ್ರಪಂಚದಲ್ಲಿ ತೇಲಾಡುತ್ತಿದ್ದರು. 

You may also like...