• Uncategorised

ಒಂದೇ ದಿನದಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ, ಇನ್ನುಮುಂದೆ ಬಡವರಿಗೆ ಕೇಡುಗಾಲ

ಭಾರತೀಯರಿಗೂ ಬಂಗಾರಕ್ಕೂ ಬಿಡಲಾರದ ನಂಟಿದೆ. ಹೌದು ಬಂಗಾರವು ಮನೆಯಲ್ಲಿ ಇದ್ದರೆ ಸಾಕು ಒಂದಿಷ್ಟು ಧೈರ್ಯ ಬರುತ್ತದೆ.ಮದುವೆ ಸೀಸನ್‌ಗೂ ಮುನ್ನ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಇದಲ್ಲದೇ ಬೆಳ್ಳಿ ಬೆಲೆಯೂ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 62,000 ರೂಪಾಯಿಯ ಗಡಿ ದಾಟಿದೆ. ಬೆಳ್ಳಿ ಕೂಡಾ 73,000 ರೂ. ಆಗಿದೆ.

ಮದುವೆ ಸೀಸನ್‌ಗೂ ಮುನ್ನವೇ ಚಿನ್ನದ ಬೆಲೆ ಹೆಚ್ಚುತ್ತಿದ್ದು, ಆಭರಣ ಖರೀದಿಗೆ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ ಪಟ್ಟಿದ್ದಾರೆ. ಚಿನ್ನದ ಬೆಲೆ 380 ರೂಪಾಯಿ ಏರಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 62,020  ರೂ.ಆಗಿದೆ. ಇದಲ್ಲದೇ ಬೆಳ್ಳಿಯ ದರವೂ ಶೇ.0.59ರಷ್ಟು ಏರಿಕೆಯಾಗಿದ್ದು, ಪ್ರತಿ ಕೆಜಿಗೆ 73,075 ರೂ.ಗೆ ತಲುಪಿದೆ. 

ಚಿನ್ನದ ದರದಲ್ಲಿ ನಿರಂತರವಾಗಿ ಏರಿಕೆ ಆಗುತ್ತಲೇ ಇದೆ. ಕಳೆದ ಎರಡು ವಾರದಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಾ ಬಂದಿದೆ. ಇಂದೂ ಕೂಡಾ ಚಿನ್ನದ ದರದಲ್ಲಿ ಏರಿಕೆ ಕಂಡಿದೆ. ಚಿನ್ನ, ಬೆಳ್ಳಿ ಆಭರಣ ಖರೀದಿಗೆ ಪ್ಲ್ಯಾನ್‌ ಮಾಡಿದ್ದೀರಾ. ಅಂದರೇ ಈಗಲೇ ಕೊಂಡು ಕೊಳ್ಳುವುದು ಒಳ್ಳೆಯದು. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ನಿರಂತರ ಹಾವು ಏಣಿ ಆಟ ಶುರು ಮಾಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯ ಮೇಲಿನ ಒತ್ತಡದಿಂದಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅಗ್ಗವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗಲು ಹಲವು ಕಾರಣಗಳಿವೆ. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.

ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ವಿವಿಧ ನಗರಗಳಲ್ಲಿ ಇಂದು ಚಿನ್ನದ ದರ ಕೊಂಚ ಏರಿಕೆ ಕಂಡಿದ್ದು. ಇದೇ ರೀತಿ ಹೊರರಾಜ್ಯಗಳಲ್ಲಿಯೂ ಚಿನ್ನದ ದರ ಏರಿದೆ. ಇನ್ನು ಬೆಳ್ಳಿ ದರದಲ್ಲಿ ಕೂಡ. ತುಸು ಏರಿಕೆ ಕಂಡಿದೆ.

You may also like...