• Uncategorised

ಕರುನಾಡಿಗೆ ಮಾದರಿಯಾದ ಅಶೋಕ ರೈ, ಕಾಂಗ್ರೆ.ಸ್ ಪಕ್ಷದ ನಾಯಕನಿಗೆ ಬಾರಿ ಮೆಚ್ಚುಗೆ

ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ ನಮ್ಮದು. ಈ ನಾಡಿನ ಸಂಸ್ಕೃತಿಯ ಸಾರ ಕರ್ನಾಟಕದಲ್ಲಿದೆ. ಕರ್ನಾಟಕದ‌ ಸಂಸ್ಕೃತಿಯ ಸಾರ ದಕ್ಷಿಣ ಕನ್ನಡದಲ್ಲಿದೆ. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಈ ಸಂಸ್ಕೃತಿ ಅನುರಣಿಸಿದೆ ಹೌದು ಪುತ್ತೂರಿನಲ್ಲಿ ಸೋಮವಾರ ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರದ ವತಿಯಿಂದ ಆಯೋಜಿಸಿದ ಸೇವಾ ಸೌರಭ ವಸ್ತ್ರದಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ ರೈ ಅವರು. ಇದರಲ್ಲೇನು ಹಿರಿತನವಿಲ್ಲ ನಮ್ಮ ತಂದೆ-ತಾಯಿ ಮಾಡಿಕೊಂಡ ಬಂದಿರುವ ವಸ್ತ್ರ ವಿತರಣೆಯನ್ನು ಸಂಪ್ರದಾಯವಾಗಿ ಮಾಡಿಕೊಂಡಿ ಬರುತ್ತಿದ್ದೇನೆ.
ಮುಂದಿನ ದಿನಗಳಲ್ಲಿ ದಿನಗಳಲ್ಲಿ 94ಸಿ, 94ಸಿಸಿ ಕಾನೂನು ರೀತಿಯಲ್ಲಿ ಭ್ರಷ್ಟಾಚಾರಮುಕ್ತವಾಗಿ ಪ್ರತಿಯೊಬ್ಬ ಫಲಾನುಭವಿಯ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ.

ಈಗಾಗಲೇ 600 ಮಂದಿ ಮಹಿಳೆಯರು ಮನೆಯಿಲ್ಲದೆ ನಿರ್ಗತಿಕರಾಗಿ ಬದುಕುತ್ತಿದ್ದಾರೆ. ಅವರಿಗೆ ಮೂರು ಸೆಂಟ್ಸ್ ಜಾಗ ನೀಡುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ ಎಂದರು. ಈಗಾಗಲೇ ಅಶೋಕ್ ರೈ ಅವರು ಕಳೆದ ಕೆಲವು ವರ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಿದವರು. ಸಾಮೂಹಿಕ ವಿವಾಹ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ನೆರವು, ಆರ್ಥಿಕ ದುರ್ಬಲರಿಗೆ ನಾಲ್ಕಾರು ಮನೆ ನಿರ್ಮಾಣ ಮಾಡಿಕೊಟ್ಟು ಸಾಮಾಜಿಕವಾಗಿ ಗುರುತಿಸಿಕೊಂಡವರು.

ಗಳಿಸಿದ ಆದಾಯದಲ್ಲಿ ಒಂದಂಶವನ್ನು ಸಮಾಜಕ್ಕೆ ಅರ್ಪಿಸಲು 2013ರಲ್ಲಿ ರೈ ಎಸ್ಟೇಟ್ಸ್‌ ಎಜುಕೇಶನಲ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ ಸ್ಥಾಪಿಸಿದವರು .ಅದರ ಮೂಲಕ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ವಿಧವೆಯರಿಗೆ, ನಿರುದ್ಯೋಗಿಗಳಿಗೆ, ಅನಾರೋಗ್ಯ ಪೀಡಿತರಿಗೆ, ಅಶಕ್ತರಿಗೆ ಹೀಗೆ ವಿವಿಧ ಜಾತಿ ಧರ್ಮದ 22000ಕ್ಕೂ ಹೆಚ್ಚು ಕುಟುಂಬದವರಿಗೆ ಸವಲತ್ತು ಮತ್ತು ಆರ್ಥಿಕ ನೆರವು ನೀಡಿದ್ದಾರೆ.

You may also like...