ಕಾಂತಾರ 2 ಸಿನಿಮಾ ಬಿಡುಗಡೆಗೆ ಬಾರಿ ವಿರೋಧ, ದೈವ ಮುನಿದರೆ ಹುಚ್ಚರಾಗಿ ತಿರುಗ್ತೀರಾ ಎ.ಚ್ಚರ ಇರಲಿ
ಕಾಂತಾರ ನಿಜಕ್ಕೂ ಇದೊಂದು ದಂತಕಥೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ 1 ಈಗ ದೇಶಾದ್ಯಂತ ಸದ್ದು ಮಾಡ್ತಿದೆ. ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರೂ ಮೆಚ್ಚುಗೆಯ ಮಾತುಗಳನ್ನಾಡ್ತಿದ್ದಾರೆ. ಜನರು ಈ ಸಿನಿಮಾ ಹುಬ್ಬೇರಿಸಿದ್ದಾರೆ, ಉದ್ಘರಿಸಿದ್ದಾರೆ, ಕಾಂತಾರ ಸಿನಿಮಾಗೆ ಜನ ಮನಸೋತಿದ್ದಾರೆ. ಅಷ್ಟರ ಮಟ್ಟಿಗೆ ಕಾಂತಾರ ಮೋಡಿ ಮಾಡಿದೆ.
ಅಷ್ಟಕ್ಕೂ ಈ ಸಿನಿಮಾ ಕಥೆ ಕಾಲ್ಪನಿಕವೇ? ಸಿನಿಮಾದಲ್ಲಿರೋ ಪಂಜುರ್ಲಿ ದೈವದ ಹಿನ್ನೆಲೆ ಏನು? ಕರಾವಳಿಯಲ್ಲಿ ಪಂಜುರ್ಲಿ, ಗುಳಿಗ ದೈವದ ಕಾರ್ಣಿಕ ಏನು? ಪಂಜುರ್ಲಿ, ಗುಳಿಗನನ್ನೇ ಸಿನಿಮಾದಲ್ಲಿ ತೋರಿಸಿರೋದೇಕೆ? ಹೌದು ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಈ ಪ್ರಶ್ನೆ ಸಹಜವಾಗೇ ಹುಟ್ಟಿರುತ್ತೆ ಇಂಥಾ ಹಲವು ವಿಚಾರಗಳ ಕುರಿತಾಗಿ ಇಂಟ್ರಸ್ಟಿಂಗ್ ಮಾಹಿತಿ ನೀಡ್ತೀವಿ.
ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ, ಗುಳಿಗ ರೀತಿ ತುಳು ನಾಡಿನಲ್ಲಿ ನೂರಾರು ದೈವಗಳಿವೆ, ತುಳುನಾಡಿನ ಜನರಿಗೆ ಈ ದೈವಗಳ ಮೇಲೆ ಅಪಾರ ನಂಬಿಕೆ. ದೈವಗಳ ವಿಶೇಷ ಆಚರಣೆ ಹಿಂದಿನಿಂದ ಇಂದಿನವರೆಗೂ ಇಲ್ಲಿನ ಜನ ಚಾಚೂ ತಪ್ಪದೇ ಪಾಲಿಸಿಕೊಂಡು ಬರ್ತಿದ್ದಾರೆ. ಯಾವುದೇ ಸಮಸ್ಯೆ ಇರಲಿ ಜನ ದೈವಗಳ ಮೊರೆ ಹೋಗ್ತಾರೆ, ಅದೆಷ್ಟೋ ಸಮಸ್ಯೆಗಳು ಇಂದಿಗೂ ದೈವದ ಸನ್ನಿಧಿಯಲ್ಲೇ ಬಗೆಹರಿಯುತ್ತೇ.
ಪಂಜುರ್ಲಿಯನ್ನು ಮನೆಯ ಒಳಗಡೆ ಇಟ್ಟು ಪೂಜಿಸಿದ್ರೆ, ಗುಳಿಗನನ್ನ ಮನೆ ಹೊರ ಭಾಗದಲ್ಲೋ ಗುಡ್ಡ ಪ್ರದೇಶಗಳಲ್ಲೂ ಇಟ್ಟು ಪೂಜಿಸ್ತಾರೆ. ಇಲ್ಲಿನ ಜನ ಗುಳಿಗನನ್ನು ಕ್ಷೇತ್ರ ಪಾಲಕ ಅಂತಾರೆ. ಮನೆ ಜಾಗವನ್ನು ಗುಳಿಗ ರಕ್ಷಣೆ ಮಾಡ್ತಾನೆ ಅನ್ನೋ ನಂಬಿಕೆ ಜನರದ್ದು.
ಒಂದೊಂದು ದೇವರಿಗೂ ಒಂದೊಂದು ಹಿನ್ನೆಲೆ ಇರುವಂತೆ ತುಳುನಾಡಿನಲ್ಲಿ ಆರಾಧಿಸಲ್ಪಡುವ ದೈವಗಳಿಗೂ ಹಿನ್ನೆಲೆ, ಇತಿಹಾಸ ಇದೆ. ಇಂದಿಗೂ ಪುಂಜುರ್ಲಿ ಕೋಲದ ಸಂದರ್ಭದಲ್ಲಿ ಹಂದಿಯ ಮುಖವಾಡ ಧರಿಸಲಾಗುತ್ತೆ.
ಈ ಆಚರಣೆ ಈ ದೈವದ ಹಿನ್ನೆಲೆಯನ್ನು ಸಾರಿ ಹೇಳುತ್ತೆ. ಕೃಷಿ ಪ್ರಧಾನವಾಗಿದ್ದ ಕಾಲದಲ್ಲಿ ದೈವಿ ಅಂಶ ಇದ್ದ ಹಂದಿಯನ್ನು ವ್ಯಕ್ತಿಯೊಬ್ಬ ಭೇಟೆಯಾಡಿ ಕೊಂದನಂತೆ. ಬಳಿಕ ಅದೇ ಹಂದಿ ಪಂಜರ್ಲಿ ದೈವವಾಯ್ತು. ಮುಂದೆ ಪಂಜುರ್ಲಿ ದೈವವಾಗಿ ಜನರ ಕಷ್ಟ ಬಗೆಹರಿಸೋ ಶಕ್ತಿಯಾಯ್ತು ಅನ್ನೋದು ಜನರ ನಂಬಿಕೆ. ಮನೆಯಲ್ಲಿ, ಊರಿನ ಪ್ರಧಾನ ದೈವವಾಗಿಯೂ ಪಂಜುರ್ಲಿಯನ್ನು ಆರಾಧನೆ ಮಾಡ್ತಾರೆ. ಧರ್ಮಸ್ಥಳದ ಅಣ್ಣಪ ಸ್ವಾಮಿಯಾಗಿಯೂ ಪಂಜುರ್ಲಿಯನ್ನು ಆರಾಧನೆ ಮಾಡಲಾಗುತ್ತೆ. ಇದು ಪಂಜುರ್ಲಿ ದೈವದ ಕಥೆ.
ಮೂಲ ಪಂಜುರ್ಲಿಯು ಕುಡುಮ ಕ್ಷೇತ್ರದ ಅಂದರೆ,ಈಗಿನ ಧರ್ಮಸ್ಥಳ ಅಣ್ಣಪ್ಪ ಸ್ವಾಮಿಯ ಜೊತೆ ನಿಕಟವಾದ ಸಂಬಂಧವನ್ನು ಹೊಂದಿರುವುದರಿಂದ ಇಲ್ಲಿ ಪಂಜುರ್ಲಿಯನ್ನು ಅಣ್ಣಪ್ಪ ಪಂಜುರ್ಲಿಯಂತಲೂ ಕರೆಯುತ್ತಾರೆ. ತಾನು ನೆಲೆ ನಿಂತ ಊರಿಗೆ ಅನುಗುಣವಾಗಿ ಪಂಜುರ್ಲಿಯ ಹೆಸರು ಬದಲಾಗುತ್ತಾ ಹೋಗುವುದು ಒಂದು ವಿಶೇಷ. ಅಣ್ಣಪ್ಪ ಪಂಜುರ್ಲಿ, ಅಂಗಣ ಪಂಜುರ್ಲಿ, ವರ್ನರ ಪಂಜುರ್ಲಿ, ಬಗ್ಗು ಪಂಜುರ್ಲಿ, ತೇಂಬೈಲು ಪಂಜುರ್ಲಿ, ವರ್ತೆ ಪಂಜುರ್ಲಿ, ಕುಪ್ಪೆಟ್ಟು ಪಂಜುರ್ಲಿ.
ಗೋಲಿದಡಿ ಪಂಜುರ್ಲಿ, ಬೊಲ್ಯಲ ಪಂಜುರ್ಲಿ, ಮಲಾರ ಪಂಜುರ್ಲಿ, ದೆಂದೂರ ಪಂಜುರ್ಲಿ, ಪಾಜೈ ಪಂಜುರ್ಲಿ, ಬೈಕಾಡ್ದಿ ಪಂಜುರ್ಲಿ, ಬತ್ತಿ ಪಂಜುರ್ಲಿ, ಕಲ್ಯಬೂಡು ಪಂಜುರ್ಲಿ, ಕದ್ರಿ ಪಂಜುರ್ಲಿ, ಕುಕ್ಕೆ ಪಂಜುರ್ಲಿ, ಕಾಂತಾವರ ಪಂಜುರ್ಲಿ, ಅಂಬದಾಡಿ ಪಂಜುರ್ಲಿ, ಹೀಗೆ ಪಂಜುರ್ಲಿ ದೈವದ ವಿಧಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಒಂದು ವೇಳೆ ಪಂಜುರ್ಲಿ ದೈವ ಮುನಿದರೆ ಹುಚ್ಚಾರಾಗಿ ತಿರುಗುತ್ತಾರೆ. ಊಟಕ್ಕೆ ಗತಿ ಇಲ್ಲದಂತಾಗಿದೆ ಭಿಕ್ಷೆ ಬೇಡಿ ತಿನ್ನುತ್ತಾರೆ ಎನ್ನುತ್ತಾರೆ ಇಲ್ಲಿನ ಅರ್ಚಕರು. ಹಾಗಾಗಿ ಎಂ ತಹದೇ ಸಮಯವಾದರೂ ಸರಿ ದೈವ ಮುನಿಯಬಾರದು. ಅಪಚಾರ ಮಾಡಬಾರದು.