• Uncategorised

ಕೋಡಿಶ್ರೀ ಭವಿಷ್ಯ ಕೊನೆಗೂ ನಿಜವಾಯಿತು; ಖ್ಯಾತ ಪ್ರಧಾನಿ ಸಾ ವು

ತಮ್ಮಲ್ಲರಿಗೂ ಗೊತ್ತಿರುವಂತೆ ತಮ್ಮ ಭವಿಷ್ಯವಾಣಿಯಿಂದಲೇ ಹೆಚ್ಚು ಸುದ್ದಿಯಲ್ಲಿರುವ ಹಾಸನದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿಗಳು ಆಗಾಗ ಭಯಾನಕ ಭವಿಷ್ಯವನ್ನು ನುಡಿಯುತ್ತಾರೆ. ಹೌದು ಈಗಾಗಲೇ ಅವರು ನುಡಿದಿದ್ದ ಕೆಲ ಭವಿಷ್ಯಗಳು ನಿಜವಾಗಿವೆ. ಕೊರೊನಾ, ಚಂದ್ರಯಾನ, ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ಯುದ್ಧ ಹಾಗೂ ರಾಜಕೀಯ ಬಗ್ಗೆ ಕೋಡಿಶ್ರೀ ನುಡಿ ಕೆಲ ಭವಿಷ್ಯವಾಣಿಗಳು ಸತ್ಯವಾಗಿವೆ.

ಹೊಸವರ್ಷದ ಆರಂಭದಲ್ಲಿ ಅಂದರೆ ಜನವರಿ 26ರಂದು ಗದಗದಲ್ಲಿ ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ನುಡಿದ 2024ರ ಭವಿಷ್ಯದಲ್ಲಿ ಒಂದೆರಡು ಪ್ರಧಾನಿಗಳು ಸಾವಿಗೀಡಾಗಲಿದ್ದಾರೆ. ಸಂತರ ಕೊಲೆಯಾಗುತ್ತವೆ ಎಂದಿದ್ದರು. ಕೋಡಿಮಠದ ಸ್ವಾಮೀಜಿಗಳು ಭವಿಷ್ಯ ಹೇಳಿ ಕೆಲವು ತಿಂಗಳು ಕಳೆಯುವಷ್ಟರಲ್ಲಿಯೇ ಇರಾನ್ ಪ್ರಧಾನಿ ಇಬ್ರಾಹಿಂ ರೈಸಿ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ.

ಇರಾನ್‌ ನಲ್ಲಿ ಪ್ರಧಾನಿ ಹುದ್ದೆ ಇಲ್ಲದ ಕಾರಣ ಅಧ್ಯಕ್ಷರೇ ರಾಷ್ಟ್ರ ಆಡಳಿತದ ಮುಖ್ಯಸ್ಥರಾಗಿದ್ದು, ಅವರ ಸಾವಾಗಿದೆ. ಅದಲ್ಲದೇ ಕೆಲ ದಿನಗಳ ಹಿಂದಷ್ಟೇ ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್‌ ಫಿಕೋ ಮೇಲೆ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದ, ತೀವ್ರ ಗಾಯಗೊಂಡಿದ್ದ ರಾಬರ್ಟ್‌ ಫಿಕೋ ಪವಾಡಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.ಇದರಿಂದ ಕೋಡಿಮಠದ ಸ್ವಾಮೀಜಿ ನುಡಿದ ಭವಿಷ್ಯ ನಿಜವಾದಂತಾಗಿದೆ.

ಈ ಹಿಂದೆ ಕೂಡ ಜಗತ್ತಿನಲ್ಲಿ ವಿಶಾನಿಲ ಬೀಸುವ ಪ್ರಸಂಗ ನಡೆಯಲಿದ್ದು, ರೋಗ ರುಜಿನಗಳು ಕಾಡಲಿವೆ. ವಿಶ್ವದಾದ್ಯಂತ ಇದು ವ್ಯಾಪಿಸಲಿದೆ. ಈ ವಿಶಾನಿಲದ ದುಷ್ಪರಿಣಾಮ ನಮ್ಮ ದೇಶ ಭಾರತದ ಮೇಲೂ ಉಂಟಾಗಲಿದೆ. ಎಂದು ಕೋಡಿಶ್ರೀಗಳು ಹೇಳಿದ್ದರು. ಅದರಂತೆ ಕೊರೊನಾ ವೈರಸ್ ಇಡೀ ಜಗತ್ತನ್ನು ಕಟ್ಟಿ ಕಾಡಿದ್ದು ನಿಜ. ಇದರೊಂದಿಗೆ ಕೋಡಿಶ್ರೀಗಳ ಮತ್ತೊಂದು ಭವಿಷ್ಯ ನಿಜವಾದಂತಾಗಿದೆ.

You may also like...