• Uncategorised
  • 0

ಚಂದನ್ ಶೆಟ್ಟಿ ಬಹುಪಾಲು ಆಸ್ತಿ ನಿವೇದಿತಾ ಖಾತೆಗೆ; ಡಿವೋರ್ಸ್ ಬಳಿಕ ಶೆಟ್ಟಿಗೆ ಆ ಘಾತ

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿವಾಹ ವಿಚ್ಚೇದನ ಸುದ್ದಿ ಚಂದನವನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕರುನಾಡಿನೆಲ್ಲೆಡೆ ಚರ್ಚೆಗೀಡಾಗುತ್ತಿದೆ. ದಿನಕ್ಕೊಂದು ಸುದ್ದಿ.. ದಿನಕ್ಕೊಂದು ಮಾತು.. ಕುಂತರೂ ನಿಂತರೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಸಂಸಾರದ ಕಥೆಯನ್ನೇ ಬಹುತೇಕರು ಮಾತನಾಡುತ್ತಿದ್ದಾರೆ.

ಇನ್ನೂ ಕಳೆದ ಒಂದು ವರ್ಷಗಳಿಂದ ವಿಚ್ಛೇದನದ ವಿಚಾರದಲ್ಲಿ ಯೋಚನೆ ಮಾಡಿ ಕೊನೆಗೂ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ಜೂನ್‌ 06 ಗುರುವಾರ ವಿಚ್ಛೇದನಕ್ಕಾಗಿ ಶಾಂತಿನಗರದ ಫ್ಯಾಮಿಲಿ ಕೋರ್ಟ್‌ಗೆ ತೆರಳಿದ್ದರು. ಶುಕ್ರವಾರ ಕೋರ್ಟ್ ವಿಚ್ಛೇದನವನ್ನು ಕೂಡ ಮಂಜೂರು ಮಾಡಿದೆ. ಡಿವೋರ್ಸ್‌ ಬಳಿಕ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.ತಮ್ಮ ಖಾಸಗಿ ಜೀವನ ಗೌರವಿಸುವಂತೆ ಮನವಿ ಮಾಡಿದ್ದಾರೆ.

ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ವಿಚ್ಛೇದನ ಸುದ್ದಿ ವೈರಲ್‌ ಆಗುತ್ತಿದ್ದಂತೆ ನಿವೇದಿತಾ ಗೌಡ ಅವರ ಮನೆ ಖಾಲಿಯಾಗಿದೆ. ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿ ನಿವೇದಿತಾ ಗೌಡ ಫ್ಯಾಮಿಲಿ ವಾಸವಿದ್ದು, ಘಟನೆ ಬಳಿಕ ಕುಟುಂಬಸ್ಥರು ಮನೆಯಿಂದ ಹೊರಗೆ ಹೋಗಿದ್ದಾರೆ. ಮಾಹಿತಿ ಪ್ರಕಾರ ಗುರುವಾರದಿಂದ ಮನೆಗೆ ಬೀಗ ಹಾಕಿದ್ದಾರೆ ಎನ್ನಲಾಗುತ್ತಿದೆ. ನಿವೇದಿತಾ ತಂದೆ ರಮೇಶ್, ತಾಯಿ‌ ಹೇಮ ಗುರುವಾರ ಮಧ್ಯಾಹ್ನದವರಗೆ ಮನೆಯಲ್ಲಿದ್ದರು.

ಆದರೆ ಮಧ್ಯಾಹ್ನದ ಬಳಿಕ ಮನೆಗೆ ಬೀಗ ಹಾಕಿದ್ದಾರೆ. ಸದ್ಯ ನಿವೇದಿತಾ ಕುಟುಂಬದವರು ಮಾಧ್ಯಮದವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೇ ಆಪ್ತರ ಕರೆಗೂ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಮೊಬೈಲ್‌ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಚಂದನ್ ಮನೆಗೆ ಬಂದು ನಿವೇದಿತಾ ಲಗೇಜ್ ತೆಗೆದುಕೊಂಡು ಹೋಗುವಾಗ ಚಂದನ್ ಶೆಟ್ಟಿ ಕಣ್ಣಲ್ಲಿ ಕಣ್ಣೀರು ಬಂದಿದೆ. ಬೇಸರದಿಂದ ಅಲ್ಲಿಂದ ಎದ್ದು ಹೋಗಿದ್ದಾರೆ.

You may also like...

Leave a Reply

Your email address will not be published. Required fields are marked *