ಡಿವೋರ್ಸ್ ಬಳಿಕ ಬಚ್ಚನ್ ಕುಟುಂಬದಿಂದ ಐಶ್ವರ್ಯ ರೈ ದೋಚಿದ ಆಸ್ತಿ ಎಷ್ಟು ಕೋಟಿ ಗೊ.ತ್ತಾ

ಐಶ್ವರ್ಯಾ ರೈ ಬಚ್ಚನ್ ಅವರು ತಮ್ಮ ಅದ್ಭುತ ಸೌಂದರ್ಯ, ಅಭಿನಯ, ನೃತ್ಯದಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದ ನಟಿ. ತಮಿಳಿನಲ್ಲಿ ಮಿಂಚಿದ್ದ ಐಶ್ ಬಾಲಿವುಡ್​ಗೆ ಎಂಟ್ರಿ ಕೊಟ್ಟ ನಂತರ ಹಿಂದಿರುಗಿ ನೋಡಿಲ್ಲ. ತಮಿಳಿನ ಇರುವರ್ ಸಿನಿಮಾದಲ್ಲಿ ನಟಿಸಿದ್ದ ಐಶ್​​ಗೆ ಅದುವೇ ಮೊದಲ ಸಿನಿಮಾ. ಅಲ್ಲಿಂದ ಇಲ್ಲಿಯ ತನಕ ನಟಿ 50ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ.

ಹಲವಾರು ಸಿನಿಮಾಗಳು ಬಿಗ್ ಹಿಟ್ ಎನಿಸಿಕೊಂಡಿವೆ. ವರದಿಗಳ ಪ್ರಕಾರ ನಟಿಯ ಅಂದಾಜು ಆಸ್ತಿ ಮೊತ್ತ 776 ಕೋಟಿ ರೂಪಾಯಿಗೂ ಹೆಚ್ಚಿದೆ. ಅವರು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಶ್ರೀಮಂತ ನಟಿಯರಲ್ಲಿ ಒಬ್ಬರು. ಅವರು ಸಂಪಾದಿಸಿದ ಆಸ್ತಿಯನ್ನು ಅಷ್ಟೇ ಜತನದಿಂದ ಕಾಪಾಡಿದ್ದಾರೆ ಕೂಡಾ.

ನಟಿ ಒಂದು ಸಿನಿಮಾಗೆ ಸುಮಾರು 10-12 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರ ಪಾತ್ರದ ಸ್ಕ್ರೀನ್​ಟೈಮ್ ಅನುಸರಿಸಿ ಅವರ ಪೇಮೆಂಟ್ ನಿಗದಿಯಾಗುತ್ತದೆ. ಅವರು ಜಾಹೀರಾತು ಮಾಡುವುದಾದರೆ ಒಂದು ದಿನಕ್ಕೆ 6-7 ಕೋಟಿ ಚಾರ್ಜ್ ಮಾಡುತ್ತಾರೆ. ನಟಿ ಹಲವಾರು ವರ್ಷಗಳಿಂದ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬ್ರ್ಯಾಂಡ್​ಗಳಿಗೆ ಜಾಹೀರಾತು ಕೊಟ್ಟಿದ್ದಾರೆ.

ಇನ್ನು ಎಕಾನಮಿಕ್ ಟೈಮ್ಸ್ ವರದಿ ಪ್ರಕಾರ ಐಶ್ವರ್ಯಾ ಅವರು ನ್ಯೂಟ್ರಿಷಿಯನ್ ಸಂಬಂಧಿತ ಪಾಸಿಬಲ್ ಎಂಬ ಕಂಪೆನಿಯ ಮೇಲೂ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಕಂಪೆನಿ ಮೇಲೆ ನಟಿ 5 ಕೋಟಿ ಹೂಡಿಕೆ ಮಾಡಿದ್ದರೆ, ಇದಕ್ಕೂ ಮೊದಲು ಬೆಂಗಳೂರಿನ ಸ್ಟಾರ್ಟಪ್​ ಆಂಬೀಯಲ್ಲಿ 1 ಕೋಟಿ ಹೂಡಿದ್ದರು. ಇದಲ್ಲದೆ ಮಾವ ಅಮಿತಾಭ್ ಅವರ ಕೆಲವು ಕಂಪೆನಿಗಳಲ್ಲಿಯೂ ಐಶ್ ಪಾಲಿದೆ.

ಇನ್ನು ಈ ನಟಿ ಕೊನೆಯಬಾರಿಗೆ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಂದಿನಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟಿ 10 ಕೋಟಿ ಪಡೆದಿದ್ದರು ಎನ್ನಲಾಗಿದೆ. ಸದ್ಯ ನಟಿ ಯಾವುದೇ ಮೂವಿ ಅನೌನ್ಸ್ ಮಾಡಿಲ್ಲ. ಹಾಗಾಗಿ ಒಂದುವೇಳೆ ಡಿವೋರ್ಸ್ ಪಡೆಯುವುದು ನಿಜವಾದರೆ ಡಿವೋರ್ಸ್ ಆದರೆ ಐಶ್ಗೆ ಜೀವನಾಂಶವೇ ಬೇಕಾಗಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

You may also like...