ಡೊಡ್ಮನೆ ಹುಡುಗ ಹಾಗೂ ಸಪ್ತಮಿ ಗೌಡ ಒಂದೇ ರೂಮ್ ನಲ್ಲಿ; ಪತ್ನಿ ಶ್ರೀದೇವಿ ಅರೋ ಪ
ಸ್ಯಾಂಡಲ್ ವುಡ್ನಲ್ಲಿ ವಿಚ್ಛೇದನದ ಗಾಳಿ ಜೋರಾಗಿಯೇ ಬೀಸಿದೆ.ಡಾ.ರಾಜ್‌ಕುಮಾರ್ ವಂಶದ ಕುಡಿ, ನಟ ಯುವ ರಾಜ್‌ಕುಮಾರ್ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ಡಿವೋರ್ಸ್ ನೋಟಿಸ್ ನೀಡಿದ ಬಳಿಕ ಇಬ್ಬರ ನಡುವಿನ ಆರೋಪ- ಪ್ರತ್ಯಾರೋಪಗಳು ಜಾಸ್ತಿಯಾಗಿವೆ. ಅದರಲ್ಲೂ, ಅನೈತಿಕ ಸಂಬಂಧಗಳ ಆರೋಪಗಳು ಇನ್ನೂ ಹೆಚ್ಚಾಗಿವೆ. ಶ್ರೀದೇವಿ ಭೈರಪ್ಪ ಅವರು ರಾಧಯ್ಯ ಎಂಬ ವ್ಯಕ್ತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಯುವ ರಾಜ್‌ಕುಮಾರ್ ಪರ ವಕೀಲ ಸಿರಿಲ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ.
ಇನ್ನು, ನಟನ ಲೀಗಲ್ ನೋಟಿಸ್‌ಗೆ ಉತ್ತರಿಸಿದ ಶ್ರೀದೇವಿ ಭೈರಪ್ಪ, ಯುವ ರಾಜ್‌ಕುಮಾರ್ ನಟಿ ಸಪ್ತಮಿ ಗೌಡ ಜತೆ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ಆ ಮೂಲಕ ಡಿವೋರ್ಸ್ ಪ್ರಕರಣವೀಗ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ.ನಟ ಯುವ ರಾಜ್‌ಕುಮಾರ್ ಕಳುಹಿಸಿದ ಲೀಗಲ್ ನೋಟಿಸ್‌ಗೆ ಶ್ರೀದೇವಿ ಭೈರಪ್ಪ ಮರುತ್ತರ ನೀಡಿದ್ದು, ಹಲವು ಆರೋಪಗಳನ್ನು ಮಾಡಿದ್ದಾರೆ. ಇದೇ ವರ್ಷದ ಮೇ 30ರಂದು ಶ್ರೀದೇವಿ ಭೈರಪ್ಪ ಅವರು ರಿಪ್ಲೈ ನೋಟಿಸ್ ನೀಡಿದ್ದಾರೆ.
ಸಪ್ತಮಿ ಗೌಡ ಜತೆಗೆ ಯುವ ರಾಜ್‌ಕುಮಾರ್ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ನನ್ನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದರು. ಪ್ರೀತಿಸಿ ಮದುವೆಯಾದ ಯುವ ರಾಜ್‌ಕುಮಾರ್, ಬಳಿಕ ಸಪ್ತಮಿ ಗೌಡ ಹಿಂದೆ ಬಿದ್ದಿದ್ದಾರೆ ಎಂಬುದಾಗಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದಾರೆ.ನಾನು ಹಾಗೂ ಯುವ ರಾಜ್‌ಕುಮಾರ್ 5 ವರ್ಷ ಪ್ರೀತಿಸಿದ್ದೆವು. 2019ರಲ್ಲಿ ಹಿಂದು ಸಂಪ್ರದಾಯದಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಮಾಡಿಕೊಂಡೆವು.
ಮದುವೆಗೂ ಮುಂಚೆ ಯುವ ರಾಜ್‌ಕುಮಾರ್ ನಿರುದ್ಯೋಗಿ ಆಗಿದ್ದರು. ಅವರಿಗೆ ಕರಿಯರ್ ಬಗ್ಗೆ ಫೋಕಸ್ ಇರಲಿಲ್ಲ. ಅವರ ಕುಟುಂಬವು ಕೂಡ ಆರ್ಥಿಕವಾಗಿ ಸ್ಟೇಬಲ್ ಇರಲಿಲ್ಲ. ಇದಾದ ಬಳಿಕ ಯುವ ರಾಜ್‌ಕುಮಾರ್ ಸಪ್ತಮಿ ಗೌಡ ಹಿಂದೆ ಬಿದ್ದರು. ನಟಿಯನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ಸಪ್ತಮಿ ಗೌಡ ಜತೆ ಹೋಟೆಲ್‌ನಲ್ಲಿ ಇರುವಾಗಲೇ ಯುವ ಸಿಕ್ಕಿಬಿದ್ದಿದ್ದರು. ಸಂಬಂಧ ಗೊತ್ತಾದ ಮೇಲೆ ನನ್ನ ಮೇಲೆ ಆರೋಪ ಮಾಡಲು ಶುರುವಿಟ್ಟುಕೊಂಡರು ಎಂಬುದಾಗಿ ಶ್ರೀದೇವಿ ಆರೋಪಿಸಿದ್ದಾರೆ.