• Uncategorised

ದೇಶದ ನೂತನ ಪ್ರಧಾನಿ ಆಗಲಿರುವ ರಾಹುಲ್ ಗಾಂಧಿ ಅವರ ಸರಳತೆಗೆ ಇಡೀ ದೇಶವೇ ಮೆಚ್ಚುಗೆ

ಕಳೆದ ವರ್ಷ ಕನ್ಯಾಕುಮಾರಿಯಿಂದ ಕಾರ್ಶಮಿರದವರೆಗೆ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಹೆಚ್ಚು ಜನರನ್ನು ಆಕರ್ಷಿಸಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಷ್ಟೆ ಅಲ್ಲ ಅವರು ಧರಿಸಿದ ಸರಳ ಟೀ ಶರ್ಟ್. ಹೌದು..ಇಡೀ ಯಾತ್ರೆಯುದ್ದಕ್ಕೂ ಅವರು ಧರಿಸಿದ್ದು ಒಂದೇ ತರದ ಟೀ ಶರ್ಟ್ ಅದು ಬಿಳಿ ಬಣ್ಣದ್ದು.

ಯಾತ್ರೆಯ ವಿಷಯದ ಜೊತೆಗೆ ಜೊತೆಗೆ ಹೆಚ್ಚು ಜನರನ್ನು ಕಾಡಿದ ಪ್ರಶ್ನೆ ರಾಹುಲ್ ಗಾಂಧಿ ಏಕೆ ಯಾವಾಗಲೂ ಬಿಳಿ ಬಣ್ಣದ ಟೀ ಶರ್ಟ್ ಧರಿಸುತ್ತಾರೆ ಎಂಬುದು. ಭಾರತ್‌ ಜೋಡೋ ಯಾತ್ರೆ ಮುಗಿದರೂ ಕೂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೈಟ್ ಟೀ ಶರ್ಟ್ ಧರಿಸುವುದನ್ನು ಮುಂದುವರೆಸಿದ್ದಾರೆ. ಲೋಕಸಭಾ ಚುನಾವಣೆಯ ಪ್ರಚಾರದಲ್ಲಿಯೂ ಅವರು ಈ ಟೀ ಶರ್ಟ್ ಧರಿಸಿಯೇ ಕಾಣಿಸಿಕೊಂಡಿದ್ದಾರೆ. 

ತಾವು ಯಾಕೆ ಯಾವಾಗಲೂ ಬಿಳಿ ಟೀ ಶರ್ಟ್ ಧರಿಸುತ್ತಾರೆ ಎಂಬ ಬಗ್ಗೆ ಅವರೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಈ ಬಿಳಿ ಬಣ್ಣದ ಬಟ್ಟೆ ‘ಪಾರದರ್ಶಕತೆ’ ಮತ್ತು ‘ಸರಳತೆ’ ಯನ್ನು ಸೂಚಿಸುತ್ತದೆ ಎಂದಿದ್ದಾರೆ. ಜೊತೆಗೆ ತಾವು ಬಟ್ಟೆಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ.

ಇನ್ನು ಪ್ರಚಾರದ ವೇಳೆ ಸಣ್ಣ ಸಲೂನಿಗೆ ಭೇಟಿ ನೀಡಿ ಕೂದಲನ್ನು ಕಟ್ ಮಾಡಿಸಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೇ ತಮ್ಮದು ಸರಳ ಬದುಕು ಎಂದಿದ್ದಾರೆ. ಅತಿ ಸರಳವಾಗಿ ಬದುಕಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಈ ವಿಡಿಯೋಗಳನ್ನು ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದೆ. ಇವರ ಸರಳತೆಗೆ ಹ್ಯಾಟ್ಸಾಫ್ ಅಂದಿದ್ದಾರೆ ಅಭಿಮಾನಿಗಳು.

You may also like...