• Uncategorised

ಪೂಜಾ ಗಾಂಧಿ ಅವರ ತಂಗಿ ಯಾರು ಗೊತ್ತಾ, ಎಷ್ಟು ಸೂಪರ್ ಆಗಿದ್ದಾರೆ

ರಾಧಿಕಾ ಗಾಂಧಿ..ಈ ಹೆಸರನ್ನು ಎಲ್ಲೊ ಕೇಳಿದ್ದೀವಿ ಅಂತ ನಿಮಗೆ ಅನಿಸಬಹುದು. ಇದು ಬೇರೆ ಯಾರೂ ಅಲ್ಲ.. ಮಳೆ ಹುಡುಗಿ ಪೂಜಾ ಗಾಂಧಿ ಅವರ ತಂಗಿಯ ಹೆಸರು. ವೀರ, ಕಲಾಕಾರ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಆ ಎರಡೂ ಸಿನೆಮಾ ಹೇಳಿಕೊಳ್ಳುವಂತಹ ಹಿಟ್ ಆಗಲೇ ಇಲ್ಲ.

ಅಕ್ಕನ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದ ರಾಧಿಕಾ ಗಾಂಧಿ ಕನ್ನಡದಲ್ಲಿ ಕೆಲ ಸಿನಿಮಾಗಳನ್ನು ಮಾಡಿದರು. ಆದರೆ ಅವರ ಯಾವ ಸಿನಿಮಾವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಪೂಜಾ ಗಾಂಧಿ ಅವರಿಗೆ ಸಿಕ್ಕ ಸಕ್ಸಸ್ ತಂಗಿಗೆ ಸಿಗಲಿಲ್ಲ. ಬಳಿಕ ಕನ್ನಡದಲ್ಲಿ ಕಣ್ಮರೆಯಾದ ಈ ಚೆಲುವೆ ಪರಭಾಷೆಯಲ್ಲಿಯೂ ಹೆಚ್ಚು ಕಾಣಿಸಿಕೊಳಲಿಲ್ಲ.

ಯಾವುದೇ ಕಾರ್ಯಕ್ರಮದಲ್ಲಾಗಲಿ, ಅಕ್ಕನ ಚಿತ್ರದ ಪ್ರೆಸ್ ಮೀಟ್ ಗಳಲ್ಲಾಗಲಿ ಆಕೆ ಭಾಗಿಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಅವರು ಸಕ್ರಿಯವಾಗಿಲ್ಲ. ಅವರ ಹೆಸರಿನ ಫೇಸ್ ಬುಕ್ ಖಾತೆಗಳಲ್ಲಿ ಪೋಸ್ಟ್ ಹಾಕಿ ವರ್ಷಗಳೇ ಉರುಳಿವೆ. ಸದ್ಯದ ಸುದ್ದಿ ಪ್ರಕಾರ ರಾಧಿಕಾ ಅವರು ಸಿನಿಮಾ ಸಹವಾಸ ಬೇಡ ಅಂತ ನಿರ್ಧರಿಸಿದ್ದಾರಂತೆ.

ಜೊತೆಗೆ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿಕೊಂಡಿದ್ದಾರಂತೆ. ಸಿನಿಮಾಗಳಲ್ಲಿ ರಾಧಿಕಾ ಗಾಂಧಿ ಆಸಕ್ತಿ ಕಳೆದುಕೊಂಡಿದ್ದು, ಮುಂದೆಯೂ ಸಿನಿಮಾವನ್ನು ಮಾಡದಿರುವ ನಿರ್ಧಾರ ಮಾಡಿದ್ದಾರಂತೆ. ಎಂಬ ಸುದ್ಧಿ ಕೆಲ ವರ್ಷಗಳ ಹಿಂದೆ ಎಲ್ಲೆಡೆ ಸದ್ದು ಮಾಡಿತ್ತು.

ಅಕ್ಕ ಪೂಜಾ ಗಾಂಧಿ ಅಭಿನೇತ್ರಿಯಾಗ್ತಿದ್ರೆ ತಂಗಿ ಮಾತ್ರ ಸಾಕಪ್ಪಾ ಸಾಕು ಅಭಿನಯದ ಸಹವಾಸ ನಾನು ಇಲ್ಲಿಗಂತೂ ಬರೋದಿಲ್ಲ ಅಂದ್ರು. ರಾಧಿಕಾ ಗಾಂಧಿ ಅನ್ನೋ ಹೆಸ್ರು ನಮ್ಗೆ ಗೊತ್ತಿಲ್ಲದ ಹಾಗೆ ಮರ್ತು ಹೋಗ್ತಾ ಇದೆ. ಆದ್ರೆ ಕನ್ನಡದಲ್ಲಿ ಅಕ್ಕ ಪೂಜಾ ಗಾಂಧಿಯ ಹಾದಿಯಲ್ಲೇ ಬೆಳೆದು ದೊಡ್ಡ ಹೀರೋಯಿನ್ ಆಗ್ತಾಳೆ ಅಂತ ಸ್ಯಾಂಡಲ್ವುಡ್ ಅಂದುಕೊಂಡಿತ್ತು.

ಆದ್ರೆ ರಾಧಿಕಾ ಗಾಂಧಿ ಮಾತ್ರ ಅಕ್ಕ ಅಭಿನೇತ್ರಿ ಅಗೋದನ್ನ ನೋಡ್ತೀನಿ ಆದ್ರೆ ನಾನು ಆಗಲ್ಲ ನಂಗ್ಯಾಕೋ ಈ ಫೀಲ್ಡ್ ಬೇಡ ಅಂತಿದ್ದಾರೆ. ಮೊನ್ನೆ ಪೂಜಾ ಗಾಂಧಿ ಮದುವೆಯಲ್ಲಿ ಕ್ಯಾಮರಾ ಕಣ್ಣಿಗೆ ಸಿಕ್ಕ ಇವರು ಮೊದಲಿಗಿಂತ ಹೆಚ್ಚು ದಪ್ಪ ಹಾಗೂ ಸೀರಿಯಸ್ ಲುಕ್ ಅಲ್ಲಿ ಗಮನ ಸೆಳೆದರು.

You may also like...