ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಣ್ಣು ಹಾಕಿದ ಕಂಡಕ್ಟರ್, ರೊಚ್ಚಿಗೆದ್ದ ಗಂಡ ಮಾಡಿದ್ದೇನು ಗೊ.ತ್ತಾ
ಕೈಕಂಬ ಬಸ್ ನಿಲ್ದಾಣದಲ್ಲಿ ತನ್ನ ಹೆಂಡತಿಗೆ ಕರೆ ಮಾಡಿದ್ದಾನೆಂದು ಆರೋಪಿಸಿ ವ್ಯಕ್ತಿಯೊಬ್ಬ ಖಾಸಗಿ ಬಸ್ ಕಂಡಕ್ಟರ್ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿದೆ. ಕೈಕಂಬ ಬಸ್ ನಿಲ್ದಾಣದ ಬಳಿ ಆಗಸ್ಟ್ 21 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಬಂದು ಗಲಾಟೆ ನಡೆಸಿದ ಘಟನೆ ನಡೆದಿದೆ.
ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ದೊಣ್ಣೆ ಹಿಡಿದು ಬಂದು ಬಸ್ಸಿಗೇರಲು ಯತ್ನಿಸಿದ್ದು ಈ ವೇಳೆ ಬಸ್ ಒಳಗೆ ಹೋಗಲು ಬಿಡದೆ ಸಾರ್ವಜನಿಕರು ತಡೆದಿದ್ದಾರೆ. ತನ್ನ ಹೆಂಡತಿಗೆ ಬಸ್ ಕಂಡಕ್ಟರ್ ಕರೆ ಮಾಡಿದ್ದಾನೆಂದು ಕೋಪಗೊಂಡ ವ್ಯಕ್ತಿ ಖಾಸಗಿ ಬಸ್ ಕಂಡಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕೈಕಂಬ ಬಸ್ ನಿಲ್ದಾಣದಲ್ಲಿ ನಡೆದಿದ್ದು.
ಮಂಗಳೂರಿನಿಂದ ಕುಪ್ಪೆಪದವು ತೆರಳುವ ಖಾಸಗಿ ಬಸ್ಸನ್ನು ಅಡ್ಡಗಟ್ಟಿ ಬಸ್ ಕಂಡಕ್ಟರ್ ಮೇಲೆ ಹಲ್ಲೆಗೆ ವ್ಯಕ್ತಿಯೊಬ್ಬ ಪ್ರಯತ್ನಿಸಿದ್ದಾನೆ. ಕೆಲ ಮೂಲಗಳ ಪ್ರಕಾರ, ದೊಣ್ಣೆ ಹಿಡಿದ ವ್ಯಕ್ತಿ ಗುರುಪುರ ಕೈಕಂಬ ಬಸ್ಸು ನಿಲ್ದಾಣದ ಬಳಿ ಖಾಸಗಿ ಬಸ್ಸು ಬರುವುದನ್ನು ಎದುರು ನೋಡುತ್ತಿದ್ದ. ಅವನು ಕಾಯುತ್ತಿದ್ದ ಬಸ್ಸು ಕೆಲ ಸಮಯದಲ್ಲೇ ಬಂದಿದ್ದು, ಪ್ರಯಾಣಿಕರನ್ನು ಇಳಿಸುವ ಉದ್ದೇಶದಿಂದ ಆ ಬಸ್ಸನ್ನು ನಿಲ್ಲಿಸಲಾಗಿದೆ.
ಈ ವೇಳೆ ದೊಣ್ಣೆ ಹಿಡಿದ ವ್ಯಕ್ತಿ ಕಂಡಕ್ಟರ್ ಅನ್ನು ಗುರಿಯಾಗಿಸಿ ಬೈದುಕೊಂಡೇ ಬಸ್ಸು ಹತ್ತಲು ಮುಂದಾಗಿದ್ದಾನೆ. ಈ ವೇಳೆ ಬಸ್ಸಿನಲ್ಲಿದ್ದ ಉಳಿದವರು ಆ ವ್ಯಕ್ತಿಯನ್ನು ತಡೆದಿದ್ದು, ಇಳಿಯುವ ಪ್ರಯಾಣಿಕರಿಗೆ ತೊಂದರೆ ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.