ಬಾಲಿವುಡ್ ನಟನನ್ನು ಅಪ್ಪಿ ಮುದ್ದಾಡಿದ ರಶ್ಮಿಕಾ ಮಂದಣ್ಣ, ತಲೆಕೆಡಿಸಿಕೊಂಡ ವಿಜಯ್ ದೇವರಕೊಂಡ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಬೇಡಿಕೆ ನಟಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಬಾಲಿವುಡ್​ನ ಲ್ಲಿ ಈಗಾಗಲೇ 2 ಸಿನಿಮಾ ಮಾಡಿರುವ ನಟಿ ರಶ್ಮಿಕಾ ಬಗ್ಗೆ ಸಿದ್ಧಾರ್ಥ್ ಮಲ್ಹೋತ್ರಾ ಮಾತಾಡಿದ್ದು, ಸಿನಿಮಾ ಸೆಟ್​ನಲ್ಲಿ ರಶ್ಮಿಕಾ ವರ್ತನೆ ಕಂಡು ಸಿದ್ಧಾರ್ಥ್ ಅಚ್ಚರಿಕೊಂಡಿದ್ದರಂತೆ.

ಕೆಲ ತಿಂಗಳ ಹಿಂದಷ್ಟೇ ರಿಲೀಸ್ ಆದ ರಶ್ಮಿಕಾ ಮಂದಣ್ಣ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಜೊತೆ ನಟನೆಯ ಮಿಷನ್ ಮಜ್ನು ಸಿನಿಮಾ ಸೂಪರ್ ಹಿಟ್ ಆಗಿತ್ತು. ನಟ-ನಟಿ ಇಬ್ಬರೂ ಸಿನಿಮಾ ಗೆದ್ದ ಖುಷಿಯಲ್ಲಿದ್ದರು .ಈ ಸಂದರ್ಶನವೊಂದರಲ್ಲಿ ರಶ್ಮಿಕಾ ಬಗ್ಗೆ ಸಿದ್ಧಾರ್ಥ್ ಮಾತಾಡಿದ್ದಾರೆ.ರಶ್ಮಿಕಾ ಮಂದಣ್ಣ ಅನೇಕ ಸಂದರ್ಶನ ಹಾಗೂ ಕ್ಯಾಮೆರಾ ಮುಂದೆ ಕೈ ಸನ್ನೆ ಮೂಲಕ ಭಾವನೆ ವ್ತಕ್ತಪಡಿಸಿ ಸುದ್ದಿಯಾಗಿದ್ದಾರೆ.

ವಿಕ್ಟರಿ, ಹಾರ್ಟ್ ಮಾರ್ಕ್ ಮತ್ತಿತ್ಯಾದಿ ಸನ್ನೆಗಳನ್ನು ತೋರಿಸುತ್ತಾರೆ. ಶೂಟಿಂಗ್ ಸೆಟ್ನಲ್ಲೂ ಇದೆ ರೀತಿ ಸನ್ನೆ ಮಾಡ್ತಿದ್ದರಂತೆ. ತಮ್ಮ ಮಿಷನ್ ಮಜ್ನು ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಭಾಗವಹಿಸಲು ರಶ್ಮಿಕಾ ಸಖತ್‌ ಹಾಟ್ ಲುಕ್‌ನಲ್ಲಿ ಬಂದಿದ್ದರು. ಮಿನಿ ಸ್ಕರ್ಟ್ ಹಾಕಿಕೊಂಡು, ಎಲ್ಲರ ಗಮನ ಸೆಳೆದಿದ್ದರು. ಈ ವೇಳೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಲವ್ ಸಿಂಬಲ್ ಪೋಸ್‌ ಕೊಟ್ಟಿದ್ದರು.

ಸಕ್ಕತ್ ಬೋಲ್ಡ್ ಆಗಿ ಕಾಣಿಸಿಕೊಂಡ ಇವರಿಬ್ಬರೂ ಸ್ಟೇಜ್ ಮೇಲೆ ಕ್ಯೂಟ್ ಅಗಿ ನಡೆದುಕೊಂಡಿದ್ದಾರೆ. ಇದೀಗ ಈ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಮಾತ್ರವಲ್ಲ ದೇವರಕೊಂಡ ಗೆ ಕೈ ಕೊಡುವಂತೆ ಕಾಣುತ್ತಿದೆ ಎಂದು ಅಭಿಮಾನಿಗಳು ಹೇಳುವಂತಾಗಿದೆ.
ವಿಜಯ್ ದೇವರಕೊಂಡ ಜೊತೆ ಗೀತ ಗೋವಿಂದಂ ಬಳಿಕ ರಶ್ಮಿಕಾ ಹಾಗೂ ವಿಜಯ್‌ ಬಗ್ಗೆ ಗಾಸಿಪ್‌ ಶುರುವಾಗಿತ್ತು.

ಇದೀಗ ಸಿದ್ಧಾರ್ಥ ಮಲ್ಹೋತ್ರಾ ಜೊತೆ ರಶ್ಮಿಕಾ ಹಾರ್ಟ್‌ ಸಿಂಬಲ್‌ ಪೋಸ್‌ ಕೊಟ್ಟಿರುವುದು ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಅನೇಕ ಗಾಸಿಪ್‌ಗಳು ಶುರುವಾಗಿವೆ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ರಶ್ಮಿಕಾ ಮಂದಣ್ಣ ಕೆಲವೇ ದಿನಗಳಲ್ಲಿ ಸ್ಟಾರ್ ಸ್ಟೇಟಸ್ ಪಡೆದುಕೊಂಡರು.

ಚಲೋ ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿಕೊಟ್ಟರು. ತಮ್ಮ ಟ್ಯಾಲೆಂಟ್‌ ಮತ್ತು ಬ್ಯೂಟಿ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ನ್ಯಾಷನಲ್‌ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಸದ್ಯ ಯಶಸ್ಸಿನತ್ತ ದಾಪುಗಾಲಿಟ್ಟಿದ್ದಾರೆ.

You may also like...