ಬಿಗ್ ಬಾಸ್ ಆಫರ್ ರಿಜೆಕ್ಟ್ ಮಾಡಿದ ರಂಜಿನಿ ರಾಘವನ್, ಕಾರಣ ಕೇಳಿ ಶಾ.ಕ್ ಆದ ಫ್ಯಾನ್ಸ್

ಅಕ್ಟೋಬರ್ 8ರಂದು ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿತ್ತು. ಈ ಮನೆಗೆ ಯಾರು ಯಾರು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಎಂಬ ಕುತೂಹಲ ಆಗಲೇ ಶುರುವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಹೆಸರಿನ ಲಿಸ್ಟ್ ವೈರಲ್ ಆಗುತ್ತಲಿತ್ತು. ಅಂತೆಯೇ ಕನ್ನಡತಿ, ಪುಟ್ಟಗೌರಿ ಮದುವೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ರಂಜನಿ ರಾಘವನ್ ಅವರು ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು.

ಈ ಬಗ್ಗೆ ರಂಜನಿ ಅವರು ಕೆಲ ದಿನಗಳ ನಂತರ ಸ್ಪಷ್ಟನೆ ನೀಡಿದ್ದರು. ನಾನು ಬಿಗ್ ಬಾಸ್‌ಗೆ ಹೋಗ್ತಾ ಇಲ್ಲ. ಸುಳ್ಳು ಸುದ್ದಿ, ನನ್ನ ಕರಿಯರ್ ಪ್ಲ್ಯಾನ್ ಬೇರೆ ಇದೆ. ಸೂಕ್ತ ಸಮಯದಲ್ಲಿ ತಿಳಿಸುವೆ. ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ ಎಂದು ನಟಿ ರಂಜನಿ ರಾಘವನ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರು.

ಕಳೆದ 3-4 ಸೀಸನ್‌ಗಳಿಂದಲೂ ರಂಜನಿ ರಾಘವನ್ ಅವರು ಬಿಗ್ ಬಾಸ್ ಮನೆಗೆ ಹೋಗ್ತಾರೆ ಎನ್ನಲಾಗಿತ್ತು. ಹೋಗಿರಲಿಲ್ಲ. ಈ ಬಾರಿ ಕೂಡ ಅವರು ಬಿಗ್ ಬಾಸ್ ಮನೆಗೆ ಹೋಗ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಅದಕ್ಕೆ ಅವರು ಉತ್ತರ ನೀಡಿದ್ದಾರೆ. ಇನ್ನು ಕನ್ನಡತಿ ಧಾರಾವಾಹಿ ನಂತರ ರಂಜನಿ ರಾಘವನ್ ಅವರು ಸಿನಿಮಾಗಳ ಕಡೆಗೆ ಮುಖ ಮಾಡಿದ್ದಾರೆ. ಹೀಗಾಗಿ ಅವರು ಬಿಗ್ ಬಾಸ್ ಶೋಗೆ ಹೋಗುವ ಮನಸ್ಸು ಮಾಡಿಲ್ಲ ಎನಿಸುತ್ತದೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು ಅದೀಗ ನಿಜವಾಗಿದೆ.

ಹೌದು ಸತ್ಯಂ ಸಿನೆಮಾ ಸಮಾರಂಭದಲ್ಲಿ ಮಾತನಾಡಿದ ರಂಜಿನಿ ರಾಘವನ್ ಅವರು ಬಿಗ್ಬಾಸ್ ನನಗಲ್ಲ. ನನಗೆ ರಿಯಲಿಸ್ಟಿಕ್ ಆಗಿ ಅಭಿನಯಿಸಲು ಬರುವುದಿಲ್ಲ ನನಗೆ ಸ್ಕ್ರಿಪ್ಟ್ ನೀಡಿದರೆ ಅದಕ್ಕೆ ಪರಿಪೂರ್ಣತೆ ತುಂಬಲು ನೋಡುತ್ತೇನೆ. ನನ್ನದು ಅಭಿನಯ ಸಂಗೀತದ ಕಡೆ ಆಸಕ್ತಿ ಹಾಗಾಗಿ ಈ ವರೆಗೆ ಯಾವುದೆ ರಿಯಾಲಿಟಿ ಶೋನಲ್ಲಿ ಅಭಿನಯಿಸಿಲ್ಲ ಎಂದಿದ್ದಾರೆ.

You may also like...