ಬಿಗ್ ಬಾಸ್ ಗೆ ಸುದೀಪ್ ಸರಿ ಬರಲ್ಲ, ಕಿಚ್ಚನ ವಿರುದ್ಧ ಹೊಸ ಬಾಂ.ಬ್ ಸಿಡಿಸಿದ ಆಯ೯ವಧ೯ನ್ ಗುರೂಜಿ
ಬಿಗ್ ಬಾಸ್ ಮನೆಯಲ್ಲಿ ಮೋಸವಾಗುತ್ತಿದೆ. ವೋಟಿಂಗ್ ಎಷ್ಟು ಬಂದಿದೆ ಎಂದು ಜನರಿಗೆ ತೋರಿಸಬೇಕು ಎನ್ನುತ್ತಾರೆ ಆರ್ಯವರ್ಧನ್ ಗುರೂಜಿ. ಬಿಗ್ ಬಾಸ್ ಸೀಸನ್ 9ರಲ್ಲಿ ಮಿಂಚಿರುವ ಆರ್ಯವರ್ಧನ್ ಗುರೂಜಿ ಮೊದಲ ಸಲ ವೋಟಿಂಗ್ ದೊಡ್ಡ ಫ್ರಾಡ್ ಎಂದು ಧ್ವನಿ ಎತ್ತಿದ್ದಾರೆ. ಅಲ್ಲದೆ ಎಲಿಮಿನೇಟ್ ಆಗಿ ಹೊರ ಬಂದವರಿಗೆ 20 ಸಾವಿರ ರೂಪಾಯಿ ಸಿಕ್ಕಿರುವುದು ಹೆಚ್ಚು ಎನ್ನುತ್ತಾರೆ. ಇದಕ್ಕೂ ಮೀರಿ ಸುದೀಪ್ ಯಾರಿಗಾದರೂ ಆಕ್ಟಿಂಗ್‌ನಲ್ಲಿ ಅವಕಾಶ ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳಿಗೆ ಬರುವ ವೋಟ್‌ಗಳನ್ನು ಟಿವಿಯಲ್ಲಿ ತೋರಿಸಬೇಕು. ಪಬ್ಲಿಕ್ ಮೇಲೆ ಎತ್ತಾಕಬಾರದು. ಹೀಗೆ ಮಾಡಿ ಪಬ್ಲಿಕ್‌ನ ಬಕ್ರಾ ಮಾಡ್ತಾರೆ ಜನರನ್ನು ದಡ್ರು ಮಾಡ್ತಾರೆ. ಮೊದಲು ಸೇಫ್ ಆಗಿರುವವರ ವೋಟ್ ಮತ್ತು ಕೊನೆಯಲ್ಲಿ ಎಲಿಮಿನೇಟ್ ಆಗುವವರು ವೋಟ್ ಎಷ್ಟು ಬಂದಿದೆ ತೋರಿಸಬೇಕು. ನಾನು ಇರದಲ್ಲಿ ಇದ್ದವನು. ನನಗೆ 46 ವರ್ಷ ನಾನು ಕುಗ್ಗಿದ್ದೀನಿ. ನಾನು ಜ್ಯೋತಿಷ್ಯ ಹೇಳಿರುವ ಜನರು ವೋಟ್ ಹಾಕಿದರೇ ನಾನು ಗೆದ್ದಿರುವೆ. ಆದರೆ ಜನರ ಮೇಲೆ ಎತ್ತಾಕುತ್ತಾರೆ. ಫಸ್ಟ್ ಜಾಗದಲ್ಲಿ ಯಾರಿದ್ದಾರೆ ಅಂತ ಹೇಳಿದ್ರೆ ಇವ್ರ ಗಂಟು ಕಳೆದುಕೊಳ್ಳುತ್ತಾರಾ? ಮೊದಲನೇ ವಾರ ನಾನು ಮೊದಲು ಸೇಫ್ ಆಗುತ್ತಿದ್ದೆ ಆಮೇಲೆ ಕೊನೆಯಲ್ಲಿ ಸೇಫ್ ಆಗುತ್ತಿದ್ದೆ, ನಾವು ಏನೇ ದಡ್ಡರೇ? ಹೊರಗಿನ ಪ್ರಪಂಚ ಹೇಗೆ ಅನ್ನೋದು ನನಗೆ ಗೊತ್ತು ಸೇಫ್ ಆಗಿದ್ದರೆ ಆದರೆ ಡ್ರೋನ್ ಪ್ರತಾಪ್ ನೋಡಿ ಪಾಪ್’ ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ ಆರ್ಯವರ್ಧನ್.
ಒಳ್ಳೆ ಹುಡುಗ ಪ್ರತಮ್ ಬಿಗ್ ಬಾಸ್‌ನಲ್ಲಿ ಡೈಲಾಗ್ ಹೇಳಿಕೊಂಡು ಚೆನ್ನಾಗಿದ್ದರು ಆದರೆ ಸಿನಿಮಾದಲ್ಲಿ ಇನ್ನೂ ಸೈಕಲ್ ಹೊಡೆಯುತ್ತಿದ್ದಾರೆ. ಬೆಳಕಿನಲ್ಲಿ ಸಿನಿಮಾ ತೆಗೆದು ಕತ್ತಲಿನಲ್ಲಿ ಚಂದಮಾಮ ತೋರಿಸಬೇಕು.ಬಿಗ್ ಬಾಸ್ ಆದ್ಮೇಲೆ ನಿರೂಪಕನಾಗಿ ಕೆಲಸ ಸಿಕ್ಕರೆ ಮಾತ್ರ ಬಚಾವ್ ಇಲ್ಲ ಅಂದ್ರೆ ಏನ್ ಮಾಡೋಕೂ ಆಗಲ್ಲ. ಜನರನ್ನು ಖರೀದಿ ಮಾಡಲು ಆಗಲ್ಲ. ಪ್ರಪಂಚನ್ನು ಪ್ರಿಡಿಕ್ಟ್ ಮಾಡುವ ವ್ಯಕ್ತಿ ನಾನು. ನನಗೆ ಹೆಚ್ಚಿಗೆ ವೋಟ್ ಬರುತ್ತದೆ. ನೀವೇ ಹೇಳಿ ಇಷ್ಟು ದಿನಗಳಲ್ಲಿ ಸುದೀಪ್ ಯಾರಿಗಾದರೂ ಆಕ್ಟಿಂಗ್ ಅವಕಾಶ ಕೊಟ್ಟಿದ್ದಾರಾ? 10 ವರ್ಷದಿಂದ ಬಿಗ್ ಬಾಸ್ ಮನೆಯಲ್ಲಿದ್ದವರಿಗೆ ಅವಕಾಶ ಕೊಟ್ಟಿದ್ದಾರಾ? ಸೀರಿಯಲ್‌ಗೆ ಕರೆದಿದ್ದಾರೆ ಸ್ವಲ್ಪ ದುಡ್ಡು ಕೊಡಬಹುದು ಆದರೆ ಹೆಸರು ಮಾಡೋಕೆ ಆಗುತ್ತಿಲ್ಲ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅದೇ ಕ್ಷೇತ್ರದಲ್ಲಿದ್ದರೂ ಅದಿಕ್ಕೆ ಹಣ ಮಾಡುತ್ತಿದ್ದಾರೆ’ ಎಂದು ಅರ್ಯವರ್ಧನ್ ಹೇಳಿದ್ದಾರೆ.
ಕೈಯಲ್ಲಿ ಚಪ ಮಾಲೆ ಇದ್ರೆ ಮನಸ್ಸು ಚಂಚಲ ಆಗುತ್ತದೆ ಆದರೆ ಅದೇ ಕೈಯಲ್ಲಿ 50 ಸಾವಿರ ಕೊಡಿ ಮನಸ್ಸು ಅಲ್ಲೇ ಇರುತ್ತದೆ. ಚಪಮಾಲೆಗಿಂತ ದುಡ್ಡಿದ ಬೆಲೆ ಜಾಸ್ತಿ. ವರ್ತೂರ್ ಸಂತೋಷ್ ಮತ್ತು ನಾನು ಜನರನ್ನು ಸಂಪಾದನೆ ಮಾಡಿ ಏನು ಮಾಡಬೇಕು? ಎಲ್ಲೋ ಕಾಫಿ ಟೀ ಕುಡಿಯಲು ಹೋದಾಗ ನಾಲ್ಕೈದು ಜನ ಫೋಟೋ ಕೇಳುತ್ತಾರೆ ಪೋಸ್ ಕೊಡುವಷ್ಟರಲ್ಲಿ ಕಾಫಿ ತಣ್ಣಗಾಗುತ್ತದೆ…ಅಲ್ಲೂ ನನಗೆ ಲಾಸ್. ಮಾರ್ಕೆಟ್‌ನಲ್ಲಿ ಸಿನಿಮಾದಿಂದ ಸಿನಿಮಾ ಮಾಡಿಕೊಂಡು ಹಣ ಹೆಸರು ಮಾಡಬೇಕು. ಬಿಗ್ ಬಾಸ್ ಮನೆಯಲ್ಲಿ ಹಾಗೆ ಆಗುವುದಿಲ್ಲ. ಆ ಸೀಸನ್‌ನಲ್ಲಿ ಫೇಮಸ್ ಆಗುತ್ತಾರೆ ಆಮೇಲೆ ಲೆಕ್ಕ ಇಲ್ಲ…ಬಿಗ್ ಬಾಸ್ ಮನೆಯಲ್ಲಿದ್ದವರಿಗೆ ಕೆಲವರಿಗೆ ಮಾತ್ರ ಸೀರಿಯಲ್ ಸಿಕ್ಕಿರುವುದು. ಈಗ ಮನೆ ಹುಡುಕುತ್ತಿರುತ್ತೀವಿ ಯಾರಾದರೂ ಬಂದ ನೀವು ಬಿಗ್ ಬಾಸ್ ಮನೆಯಲ್ಲಿ ಕಡಿಮೆ ಬಾಡಿಗೆ ಕೊಡಿ ಅಂತ ಹೇಳಲ್ಲ. ಅಥವಾ ಅಲ್ಲಿದ ಹೊರ ಬಂದವರು ತಂಗಿಗೆ ಕಾರು ಕೊಡಿಸಿದ ತಾಯಿ ಮತ್ತೊಂದು ಕೊಡಿಸಿದ ಅಂತ ಹೇಳಲ್ಲ. ದುಡ್ಡು ಕೊಡಬೇಕಾ ಬೇಡ್ವಾ ಅನ್ನೋತರ ಕೊಟ್ಟಿರುತ್ತಾರೆ. ಮೊನ್ನೆ ಮೊನ್ನೆ ಎಲಿಮಿನೇಟ್ ಆದವರಿಗೆ 20 ಸಾವಿರ ಕೊಟ್ಟಿರುವುದು ಹೆಚ್ಚು ಎಂದಿದ್ದಾರೆ ಆರ್ಯವರ್ಧನ್ ಗುರೂಜಿ.